ಮೊಬೈಲ್ ಕಸಿದುಕೊಂಡ ಪೋಷಕರು..! ➤ 7ನೇ ಅಂತಸ್ತಿನಿಂದ ಜಿಗಿದು ಬಾಲಕಿ ಆತ್ಮಹತ್ಯೆ

(ನ್ಯೂಸ್ ಕಡಬ)newskadaba.com ಮುಂಬೈ, ಏ.11. ಪೋಷಕರು ಮೊಬೈಲ್ ಕಸಿದು ಕೊಂಡರೆಂಬ ಕ್ಷುಲಕ ಕಾರಣಕ್ಕೆ 15 ವರ್ಷದ ಬಾಲಕಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮುಂಬಯಿಯ ಪಶ್ಚಿಮ ಉಪನಗರದ ಅಲ್ವಾನಿ ಪ್ರದೇಶದಲ್ಲಿ ನಡೆದಿದೆ.


ಬಾಲಕಿ ಹೆಚ್ಚು ಮೊಬೈಲ್‌ ಬಳಸುತ್ತಿದ್ದು, ಇದರಿಂದ ಬಾಲಕಿಗೆ ಪೋಷಕರು ಬುದ್ದಿ ಮಾತನ್ನು ಹೇಳಿದ್ದರು. ಆದರೂ, ಬಾಲಕಿ ಇದನ್ನು ಕೇಳದ ಕಾರಣ ಪೋಷಕರು ಬಾಲಕಿಯಿಂದ ಮೊಬೈಲ್‌ ಕಸಿದುಕೊಂಡಿದ್ದಾರೆ. ಇದೇ ಕಾರಣದಿಂದ ಬಾಲಕಿ 7 ಅಂತಸ್ತಿನ ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Also Read  ಉಳ್ಳಾಲ: ಆಟೋ ಚಾಲಕ ನಾಪತ್ತೆ ದೂರು ದಾಖಲು

error: Content is protected !!
Scroll to Top