ಮಂಗಳೂರು: ಬಸ್ ಸೀಟಿನಿಂದ ಬಿದ್ದು ಮಹಿಳೆ ಗಂಭೀರ..!

(ನ್ಯೂಸ್ ಕಡಬ)newskadaba.com ಮಂಗಳೂರು, ಏ.11. ಹಂಪ್ಸ್ ನಲ್ಲಿ ಬಸ್ ದಿಡೀರ್ ಬ್ರೇಕ್ ಹಾಕಿದ ಕಾರಣ ಬಸ್‌ ‌ನ ಹಿಂಬದಿ ಸೀಟಿನಲ್ಲಿ ಕುಳಿತಿದ್ದ ಮಹಿಳೆಯೊಬ್ಬರು ಕೆಳಗೆ ಬಿದ್ದು ಗಂಭೀರ ಗಾಯಗೊಂಡ ಘಟನೆ ನಗರದ ಲೇಡಿಹಿಲ್ ಬಳಿ ನಡೆದಿದೆ.

ಪಾರ್ವತಮ್ಮ (53) ಗಾಯಗೊಂಡ ಮಹಿಳೆ ಎಂದು ತಿಳಿದುಬಂದಿದೆ.

ಪಾರ್ವತಮ್ಮ ತನ್ನ ಪತಿ ಮತ್ತು ಮೊಮ್ಮಗನೊಂದಿಗೆ ಮಂಗಳೂರಿನ ಆಸ್ಪತ್ರೆಗೆಂದು ಬಂದು ಬಸ್ ವೊಂದರಲ್ಲಿ ವಾಪಸ್ ಉಡುಪಿಗೆ ಹೋಗುತ್ತಿದ್ದರು. ಈ ವೇಳೆ ಬಸ್ ಲೇಡಿಹಿಲ್ ಸಾಯಿಬಾಬಾ ಮಂದಿರದ ಬಳಿ ತಲುಪಿದಾಗ ಬಸ್ ಚಾಲಕ ಹಂಪ್ಸ್ ಗಮನಿಸದೆ ಏಕಾಏಕಿ ಬ್ರೇಕ್ ಹಾಕಿದ್ದಾನೆ ಎನ್ನಲಾಗಿದೆ.

Also Read  ಜನವರಿಯಲ್ಲಿ ಶಿರಾಡಿ ಘಾಟ್ ಕಾಂಕ್ರೀಟ್ ರಸ್ತೆ ಕಾಮಗಾರಿ ಆರಂಭ ► ಜನವರಿ ಎರಡನೇ ವಾರದಿಂದ ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಬಂದ್

 

error: Content is protected !!
Scroll to Top