(ನ್ಯೂಸ್ ಕಡಬ)newskadaba.com ಕೊಲ್ಕತ್ತಾ, ಏ.10. ಇಬ್ಬರು ಯುವತಿಯರು ಸಿಗರೇಟ್ ಸೇದುತ್ತಾ ರಾಷ್ಟ್ರಗೀತೆಗೆ ಅಪಮಾನ ಮಾಡಿ, ಹುಚ್ಚಾಟ ನಡೆಸಿದ್ದಾರೆ. ಅಲ್ಲದೇ ಈ ಸನ್ನಿವೇಶವನ್ನ ವೀಡಿಯೋ ಮಾಡಿ ಜಾಲತಾಣದಲ್ಲೂ ಹಂಚಿಕೊಂಡಿದ್ದಾರೆ.
ಈ ವೀಡಿಯೋ ಆಧರಿಸಿ ವಕೀಲ ಅತ್ರಯೀ ಹಾಲ್ದರ್ ಅವರು ಲಾಲ್ಬಜಾರ್ ಸೈಬರ್ ಘಟಕ ಹಾಗೂ ಬಾರಕ್ಪುರದಲ್ಲಿ ದೂರು ದಾಖಲಿಸಿದ್ದಾರೆ.
ಇನ್ನು ಈ ಪೋಸ್ಟ್ ಮಾಡಲಾಗಿದ್ದ ಫೇಸ್ಬುಕ್ ಖಾತೆಯನ್ನು ಡಿಲೀಟ್ ಮಾಡಿರುವುದರಿಂದ ಈಗ ವಿಡಿಯೋ ಅದರಲ್ಲಿ ಲಭ್ಯವಿಲ್ಲ. ಆದರೆ ಕೆಲವರು ವೀಡಿಯೋವನ್ನ ಟ್ವಿಟ್ಟರ್ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ. ಸಿಗರೇಟ್ ಸೇದುತ್ತಾ ಕುಳಿತಿರುವ ಯುವತಿಯರು ಉದ್ದೇಶಪೂರ್ವಕವಾಗಿ ರಾಷ್ಟ್ರಗೀತೆಯ ಸಾಲುಗಳನ್ನ ವ್ಯಂಗ್ಯವಾಗಿ ಹಾಡಿ, ಅಪಮಾನ ಮಾಡಿದ್ದಾರೆ ಎನ್ನಲಾಗಿದೆ.