ನಾವು ಈ ಬಾರಿ ಯಾರಿಗೂ ಓಟು ಹಾಕುದೇ ಇಲ್ಲ!   ➤ ನಿಖಿಲ್ ಕುಮಾರಸ್ವಾಮಿಗೆ ಮಹಿಳೆಯರ ತರಾಟೆ.!

(ನ್ಯೂಸ್ ಕಡಬ) newskadaba.com.ರಾಮನಗರ,ಏ.10 ಲೋಕಸಭೆ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ವಿರುದ್ಧ ಚುನಾವಣೆಗೆ ನಿಂತು ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಸೋತಿದ್ದರು.

ಮತ್ತೆ ತಮ್ಮ ಬೆಂಬಲಿಗರೊಂದಿಗೆ ರಾಮನಗರದಲ್ಲಿ ಪ್ರಚಾರಕ್ಕೆ ಹೋಗಿದ್ದ ನಿಖಿಲ್ ಕುಮಾರಸ್ವಾಮಿಗೆ ಸ್ಥಳೀಯರಿಂದ ಅದರಲ್ಲೂ ಮಹಿಳೆಯರು ತರಾಟೆಗೆ ತೆಗೆದುಕೊಂಡಿದ್ದಾರೆ.ಚರಂಡಿ, ರಸ್ತೆಯ ವ್ಯವಸ್ಥೆಯಿಲ್ಲ, ನಮಗೆ ಕುಡಿಯಲು ನೀರಿನ ವ್ಯವಸ್ಥೆಯಿಲ್ಲ, ಮನೆಯಲ್ಲಿ ಗಂಡಸರಿಲ್ಲ, ಶೌಚಾಲಯ, ಶುಚಿತ್ವದ ಸಮಸ್ಯೆಯಿದೆ. ಮೂಲಭೂತ ಸೌಕರ್ಯಗಳು ಸರಿಯಾಗಿಲ್ಲ.

ನಿಮ್ಮ ತಾಯಿಯವರು ಸೌಲಭ್ಯ ಮಾಡಿಕೊಡುತ್ತೇವೆ ಎಂದು ಭರವಸೆ ನೀಡಿದ್ದಾರೆಯೇ ಹೊರತು ಮಾಡಿಕೊಟ್ಟಿಲ್ಲ.ಇಲ್ಲಿಗೆ ಯಾರು ಓಟು ಕೇಳಲು ಬಂದರೂ ಬರಬೇಡಿ ಎಂದು ನಾವು ಹೇಳುತ್ತೇವೆ. ಈ ಬಾರಿ ನಾವು ಯಾರಿಗೂ ಓಟು ಹಾಕುವುದಿಲ್ಲ ಎಂದು ತರಾಟೆಗೆ ತೆಗೆದುಕೊಂಡರು.

Also Read  ಎರಡು ಜೀವಗಳನ್ನು ಬಲಿ ಪಡೆದ ಬೆನ್ನಲ್ಲೇ ಕೃಷಿಕನನ್ನು ಬೆನ್ನಟ್ಟಿದ ಕಾಡಾನೆ

 

error: Content is protected !!
Scroll to Top