ದೇವಸ್ಥಾನದ ಶೆಡ್​​ ಮೇಲೆ ಉರುಳಿ ಬಿದ್ದ ಬೃಹತ್​ ಗಾತ್ರದ ಬೇವಿನ ಮರ!!   ➤7 ಜನ ಮೃತ್ಯು, 30ಕ್ಕೂ ಹೆಚ್ಚು ಮಂದಿಗೆ ಗಾಯ  

(ನ್ಯೂಸ್ ಕಡಬ) newskadaba.com. ಹಾರಾಷ್ಟ್ರ ,ಏ.10.ಭಾರೀ ಮಳೆ ಮತ್ತು ಗಾಳಿಯ ಪರಿಣಾಮ ಬೃಹತ್ ಮರವೊಂದು ದೇವಸ್ಥಾನದ ತಗಡಿನ ಶೆಡ್​​​ ಮೇಲೆ ಉರುಳಿ ಬಿದ್ದ ಘಟನೆ ಅಕೋಲಾ ಜಿಲ್ಲೆಯ ಬಾಲಾಪುರ್​ ತೆಹಸಿಲ್​​ನ ಪಾರಸ್​ ಗ್ರಾಮದ ದೇವಸ್ಥಾನದಲ್ಲಿ ನಡೆದಿದೆ. ಈ ಘಟನೆಯಿಂದ ಏಳು ಜನರು ಸಾವನ್ನಪ್ಪಿದ್ದು, 30ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ಪೂಜೆ ನಡೆಯುವ ವೇಳೆ ಅಲ್ಲಿನ ಬಾಬುಜಿ ಮಹರಾಜ್​ ಮಂದಿರದ ಆವರಣದಲ್ಲಿದ್ದ ಬೃಹತ್​ ಬೇವಿನ ಮರ ನೆಲಕಪ್ಪಳಿಸಿದೆ. ಭಾರೀ ಗಾಳಿ, ಮಳೆಯಿಂದಾಗಿ ದೇವಸ್ಥಾನದ ತಗಡಿನ ಶೆಡ್​ ಮೇಲೆ ಮರ ಉರುಳಿದೆ. ಮರ ಉರುಳಿ ಬಿದ್ದ ಪರಿಣಾಮ ಅದರಡಿಯಲ್ಲಿ ಸಿಲುಕಿದವರನ್ನು ರಕ್ಷಿಸಲು ಸ್ಥಳೀಯರು ಹರಸಾಹಸ ಪಟ್ಟಿದ್ದಾರೆ.

Also Read  ಬಂಗಾಳದಲ್ಲಿ ಮತ್ತೆ ಮಾಜಿ ಟಿಎಂಸಿ ನಾಯಕ ಮುಕುಲ್‌ ರಾಯ್‌ ಗೊಂದಲ.!!

 

 

 

error: Content is protected !!
Scroll to Top