(ನ್ಯೂಸ್ ಕಡಬ) newskadaba.com. ಬೆಂಗಳೂರು,ಏ.10. ಕೇಂದ್ರ ಸರ್ಕಾರವು ಸಾಂದ್ರಿಕೃತ ನೈಸರ್ಗಿಕ ಅನಿಲ (CNG) ಹಾಗೂ ಪೈಪ್ಡ್ ನೈಸರ್ಗಿಕ ಅನಿಲ (PNG) ದರ ಇಳಿಕೆ ಮಾಡಿದ ಬೆನ್ನಲ್ಲೇ ಕರ್ನಾಟಕದಲ್ಲೂ ಎರಡೂ ಅನಿಲಗಳ ದರ 6 ರಿಂದ 7 ರೂ. ನಷ್ಟು ಇಳಿಕೆಯಾಗಿದೆ.
ಜಿಎಐಎಲ್ ಸಿಎನ್ ಜಿ ಹಾಗೂ ಪಿಎನ್ ಜಿ ಅನಿಲ ದರ ಇಳಿಕೆ ಬಗ್ಗೆ ಪ್ರಕಟಣೆ ಹೊರಡಿಸಿದ್ದು, ಬೆಂಗಳೂರು ಮತ್ತು ದಕ್ಷಿಣ ಕನ್ನಡದಲ್ಲಿ ಪಿಎನ್ ಜಿ ದರವನ್ನು 7 ರೂ.ಹಾಗೂ ಕಂಪನಿ ಕಾರ್ಯನಿರ್ವಹಿಸುವ ಇತರ ನಗರಗಳಲ್ಲಿ 6 ರೂ.ಇಳಿಕೆ ಮಾಡಿದೆ.