ಗಡಿಯಲ್ಲಿ ಪೊಲೀಸರ ಸರ್ಪಗಾವಲು ➤ 142 ಕೆಜಿ ಬೆಳ್ಳಿ ಕಾಲುಂಗುರ ವಶ, ಎಫ್​ಐಆರ್ ದಾಖಲು

(ನ್ಯೂಸ್ ಕಡಬ)newskadaba.com ಬೀದರ್, ಏ.08. ವಿಧಾನಸಭಾ ಚುನಾವಣೆ ಹಿನ್ನೆಲೆ ಜಿಲ್ಲಾದ್ಯಾಂತ ಗಡಿ ಪ್ರದೇಶದಲ್ಲಿ 30 ಚೆಕ್ ಪೋಸ್ಟ್ ಅಳವಡಿಸಲಾಗಿದೆ.

ಗಡಿ ನಿಯಂತ್ರಣ ಪ್ರದೇಶದಲ್ಲಿ ಪೊಲೀಸ್​​ ಇಲಾಖೆ ಹದ್ದಿನ ಕಣ್ಣಿಟ್ಟಿದ್ದು, ಮಹಾರಾಷ್ಟ್ರದಿಂದ ಬರುವ ಪ್ರತಿಯೊಂದು ವಾಹನ ತಪಾಸಣೆ ಮಾಡಿ ಗಡಿ ಪ್ರವೇಶ ಒಳಗೆ ಅವಕಾಶ ಮಾಡಲಾಗ್ತಿದೆ.

ಇನ್ನು ವನಮಾರಪಳ್ಳಿ ಚೆಕ್ ಪೋಸ್ಟ್​ನಲ್ಲಿ ಅಪಾರ ಪ್ರಮಾಣದ ಹೆಣ್ಣು ಮಕ್ಕಳ ಬೆಳ್ಳಿ ಕಾಲುಂಗರವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ದಾಖಲೆ ಇಲ್ಲದೇ ಸಾಗಿಸುತ್ತಿದ್ದ ಹಿನ್ನೆಲೆ 1 ಕೋಟಿ ಐವತ್ತು ಸಾವಿರ ರೂಪಾಯಿ ಬೆಲೆ ಬಾಳುವ ಬೆಳ್ಳಿ ಕಾಲುಂಗರವನ್ನು ಪೊಲೀಸರು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.

Also Read  ಆಶಾ ಕಾರ್ಯಕರ್ತೆಯರಿಗೆ ಆಯುರ್ವೇದ ಔಷಧ ವಿತರಣೆ

 

error: Content is protected !!
Scroll to Top