ಅಂಗಾರರಿಗೆ ಮತ್ತೊಮ್ಮೆ ಅವಕಾಶ ನೀಡಿ ➤ ಮಹಾಬಲ ಪಡುಬೆಟ್ಟು ಮನವಿ

(ನ್ಯೂಸ್ ಕಡಬ)newskadaba.com ಕಡಬ, ಮಾ.08. ಸತತ ಆರು ಬಾರಿ ಸುಳ್ಯ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸಿ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಶ್ರರಮಿಸಿರುವ ನಿಷ್ಕಳಂಕ ರಾಜಕಾರಣಿ ಮಾದರಿ ವ್ಯಕ್ತಿತ್ವ ಹೊಂದಿರುವ ಸುಳ್ಯ ಶಾಸಕ ಎಸ್.ಅಂಗಾರ ಅವರಿಗೆ ಮತ್ತೊಮ್ಮೆ ಸ್ಪರ್ಧೆಗೆ ಅವಕಾಸ ನೀಡಬೇಕು ಎಂದು ಸುಳ್ಯ ಮಂಡಲ ಬಿಜೆಪಿ ಸಮಿತಿಯ ಸದಸ್ಯ ನೆಲ್ಯಾಡಿಯ ಮಹಾಬಲ ಪಡುಬೆಟ್ಟು ಪಕ್ಷದ ಹಾಗೂ ಬಿಜೆಪಿ ಮುಖಂಡರಿಗೆ ಮನವಿ ಮಾಡಿದ್ದಾರೆ.


ಅವರು ಶುಕ್ರವಾರ ಕಡಬದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ನಾವು ಮಾಡುವ ಮನಿವಿ ತಪ್ಪ ಸಂದೇಶವನ್ನು ಸಾರಬಾರದು, ನಮ್ಮ ಅಂಗಾರ ಸಾಹೇಬರು ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿರುವುದರಿಂದ ನನ್ನ ಪರವಾಗಿ ಅಥವಾ ಪಕ್ಷದ ವಿರುದ್ಧವಾಗಿ ಯಾರು ಹೇಳಿಕೆ ನಿಡಬಾರದು ಎನ್ನುವ ಕಟ್ಟಪ್ಪಣೆ ನೀಡಿದ್ದಾರೆ. ಅವರಿಗೆ ಗೊತ್ತಿಲ್ಲದೆಯೇ ನಮ್ಮ ಸ್ವ ಇಚ್ಛೆಯಿಂದ ಹೇಳಿಕೆ ನೀಡುತ್ತಿದ್ದೇವೆ ನಮ್ಮ ಹೇಳಿಕೆ ಪಕ್ಷದ ವಿರುದ್ಧವೂ ಅಲ್ಲ, ಒತ್ತಡ ತಂತ್ರವು ಅಲ್ಲ. ಅಂಗಾರ ಅವರಂತಹ ಅಪರೂಪದ ಮಾದರಿ ರಾಜಕಾರಣಿ ಕರ್ನಾಟಕದಲ್ಲೇ ಸಿಗುವುದು ಕಷ್ಟ ಆದ್ದರಿಂದ ಅವರಿಗೆ ಮತ್ತೊಮ್ಮೆ ಅವಕಾಶ ನೀಡಬೇಕು ಎಂದು ಪಕ್ಷದ ವರಿಷ್ಠರಿಗೆ ಹಾಗೂ ಸಂಘ ಪರಿವಾರದ ಮುಖಂಡರಿಗ ನಾವು ಮನವಿ ಮಾಡುವ ಮೂಲಕ ನಮ್ಮ ಭಾವನೆಯನ್ನು ವ್ಯಕ್ತಪಡಿಸುತ್ತಿದ್ದೇವೆ ಎಂದರು. ಸಂಘಪರಿವಾರ ತೋರಿಸಿಕೊಟ್ಟ ಹಾದಿಯಲ್ಲಿ ಸಾಗಿ ಪಕ್ಷವನ್ನು ತಾಯಿ ಸಮಾನ ಎಂದು ಭಾವಿಸಿ ಪಕ್ಷಕ್ಕಾಗಲೀ, ಸಮಾಜಕ್ಕಾಗಲೀ ಚ್ಯುತಿ ಬರುವ ರೀತಿಯಲ್ಲಿ ಅಂಗಾರ ಅವರು ವರ್ತಿಸಿಲ್ಲ. ಇತ್ತೀಚೆಗೆ ಸುಳ್ಯ ವಿಧಾನ ಸಭಾ ಮೀಸಲು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಯಾರೆನ್ನುವ ಬಗ್ಗೆ ಹಲವು ಗೊಂದಲಗಳಿವೆ, ಅಂಗಾರ ಅವರನ್ನು ಹೊರತುಪಡಿಸಿ ಬೇರೆಯವರ ಹೆಸರುಗಳು ಕೇಳಿಬರುತ್ತಿವೆ, ಅವರೆಲ್ಲಾ ಅಂಗಾರ ಅವರ ಸರಿಸಮಾನ ಆಗಲಾರರು, ತಳಮಟ್ಟದ ಕಾರ್ಯಕರ್ತರಿಗೆ ಈಗ ಕೇಳಿಬರುತ್ತಿರುವ ಹೆಸರಿನ ಜನಗಳ ಬಗ್ಗೆ ಗೊತ್ತೇ ಇಲ್ಲ. ಅವರೆಲ್ಲ ಒಂದು ಗ್ರಾಮಕ್ಕೆ ಸೀಮಿತವಾಗಿದ್ದಾರೆ.


ಶಾಸಕರು ಕ್ಷೇತ್ರದ ಹಳ್ಳಿ ಹಳ್ಳಿಗಳಿಗೆ ರಸ್ತೆ, ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಎಲ್ಲಾ ರೀತಿಯ ಮೂಲಭೂತ ವ್ಯವಸ್ಥೆಗಳನ್ನು ಕಲ್ಪಿಸಿಕೊಟ್ಟಿದ್ದಾರೆ. ಕ್ಷೇತ್ರದ ಆಮೂಲಾಗ್ರ ಬದಲಾವಣೆಗೆ ಕಾರಣಕರ್ತರಾಗಿದ್ದಾರೆ. ಎಲ್ಲಾ ಬಿಜೆಪಿ ಕಾರ್ಯಕರ್ತರಿಗೂ ಒಬ್ಬ ಆದರ್ಶ ನಾಯಕನಾಗಿದ್ದಾರೆ. ಅಂಗಾರರು ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ಪ್ರಚಾರಪಡಿಸುವುದರಲ್ಲಿ ನಾವೆಲ್ಲ ಸೋತಿದ್ದೇವೆ, ಕಾರ್ಯಕರ್ತರ ಮನಸ್ಸಿಗೆ ನೋವಾಗುವಂತಹ ಕೆಲವನ್ನು ಅವರು ಯಾವತ್ತೂ ಮಾಡಿಲ್ಲ ಇಂತಹ ಹಿರಿಯ ರಾಜಕಾರಣಿಗೆ ಈ ಬಾರಿ ಒಮ್ಮೆ ಅವಕಾಶ ನೀಡಬೇಕು ಉಳಿದ ಆಕಾಂಕ್ಷಿಗಳಿಗೆ ಮುಂದಿನ ಬಾರಿ ಅವಕಾಶ ಕೊಡಿ ಎಂದು ಮನವಿ ಮಾಡಿದ ಮಹಾಬಲ ಪಡುಬೆಟ್ಟು ಖಂಡಿತಾ ಇದು ಒತ್ತಡ ಅಲ್ಲ ತಾಯಿ ಸಮಾನವಾದ ಸಂಘದ ಮುಖಂಡರಿಗೆ , ಬಿಜೆಪಿ ವರಿಷ್ಠರಿಗೆ ಕಳಕಳಿಯ ಮನವಿ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದರು. ಅಂಗಾರ ಅವರು ಹೊಜಿಲ್ಲೆಯ ಬಿಜೆಪಿ ಕಾರ್ಯಕರ್ತರಿಗೂ ಬೆಳಕಾಗಿದ್ದಾರೆ. ಪಕ್ಷದ ಶಿಸ್ತು, ಪಕ್ಷ ದೇಶಕ್ಕಾಗಿ ಏನು ಕೊಡುಗೆ ಕೊಡುತ್ತಿದೆ ಎನ್ನುವುದನ್ನು ಅಂಗಾರ ಅವರ ಸಮುದಾಯದ ಜನತೆಗೆ ಈಗ ತಿಳಿದಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿಗೆ ಬರುತ್ತಿದ್ದಾರೆ ಇಂತಹ ಸಂದರ್ಭದಲ್ಲಿ ಅಂಗಾರ ಅವರಿಗೆ ಟಿಕೆಟ್ ತಪ್ಪಬಾರದು ಎಂದು ಮಹಾಬಲ ಹೇಳಿದರು.

Also Read  ಕಷ್ಟ ಪರಿಸ್ಥಿತಿಯಲ್ಲಿರುವ ಕುಸ್ತಿ ಹಾಗೂ ಕ್ರೀಡಾಪಟುಗಳಿಗೆ ಮಾಸಾಶನ


ಪತ್ರಿಕಾಗೋಷ್ಟಿಯಲ್ಲಿ ಆಲಂಕಾರು ಗ್ರಾಮ ಪಂಚಾಯಿತಿ ಸದಸ್ಯ ಕೃಷ್ಣ ಗಾನಂತಿ, ರಾಮಕುಂಜ ಗ್ರಾಮ ಪಂಚಾಯಿತಿ ಸದಸ್ಯ ಕೇಶವ ಗಾಂಧಿಪೇಟೆ, ವಿವಿಧ ಸಂಘಟನೆಗಳ ಪ್ರಮುಖರಾದ ಸಂಜೀವ ಕೆ ಶಾರದಾನಗರ, ಬಾಬು ಎಂ ಮರುವಂತಿಲ, ಪ್ರೇಮನಾಥ ಮರುವಂತಿಲ, ಮೋಹನ ಉಜುರ್ಲಿ, ಸಂದೀಪ್ ಪಾಂಜೋಡಿ ಮತ್ತಿತರರು ಉಪಸ್ಥಿತರಿದ್ದರು.

Also Read  ಡಿ.ಕೆ.ಶಿವಕುಮಾರ್ 'ಮುಖ್ಯಮಂತ್ರಿ'ಯಾಗಲು ಹೈಕಮಾಂಡ್ ಒಪ್ಪಲ್ಲ  - ಹೊಸ ಬಾಂಬ್ ಸಿಡಿಸಿದ ಸಿದ್ದರಾಮಯ್ಯ.!!

 

error: Content is protected !!
Scroll to Top