(ನ್ಯೂಸ್ ಕಡಬ)newskadaba.com ನವದೆಹಲಿ, ಏ.08. ಭಾರತ ಸರ್ಕಾರವು ದೇಶದ ನಿವಾಸಿಗಳ ವೈಯಕ್ತಿಕ ಗುರುತಿಗಾಗಿ ಬಹು ಗುರುತಿನ ದಾಖಲೆಗಳನ್ನು ಅಧಿಕೃತಗೊಳಿಸಿದ್ದು, ಅವುಗಳಲ್ಲಿ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಮತ್ತು ಡ್ರೈವಿಂಗ್ ಲೈಸೆನ್ಸ್ ಭಾರತದಲ್ಲಿ ಪ್ರಾಥಮಿಕ ಗುರುತಿನ ದಾಖಲೆಗಳಾಗಿ ಕಾರ್ಯನಿರ್ವಹಿಸುತ್ತವೆ. ಈ ಎಲ್ಲಾ ಕಾರ್ಡ್‌ಗಳು ಮುಖ್ಯವಾಗಿದ್ದರೂ, ಆಧಾರ್ ಕಾರ್ಡ್ (Aadhar card) ಅತ್ಯಂತ ಮುಖ ದಾಖಲೆಯಾಗಿದ್ದು, ಆಧಾರ್ ಕಾರ್ಡ್ ಇಲ್ಲದೆ ಯಾವುದೇ ಕೆಲಸಗಳು ಪೂರ್ಣಗೊಳ್ಳುವುದಿಲ್ಲ ಎನ್ನಲಾಗಿದೆ.
ಭಾರತ ಸರ್ಕಾರವು ಪರಿಶೀಲನೆಗಾಗಿ ಆಧಾರ್‌ನೊಂದಿಗೆ (Aadhar card) ಪಾನ್ ಕಾರ್ಡ್, ವೋಟರ್ ಐಡಿ, ರೇಷನ್ ಕಾರ್ಡ್ ಸೇರಿದಂತೆ ಹಲವು ಧಾಖಲೆಗಳನ್ನು ಲಿಂಕ್ ಮಾಡುವುದನ್ನು ಕಡ್ಡಾಯಗೊಳಿಸಿದೆ. ಇನ್ನು ಭಾರತದ ಪ್ರಜೆ ಆದವರು ಆಧಾರ್ ಕಾರ್ಡ್ ಅನ್ನು ಹೊಂದಿರುವುದು ಕಡ್ಡಾಯವಾಗಿದ್ದು, 5 ವರ್ಷದ ಮಗು ಕೂಡ ಆಧಾರ್ ಕಾರ್ಡ್ ಅನ್ನು ಮಾಡಿಕೊಳ್ಳಹುದಾಗಿದೆ.