ಬಿಜೆಪಿ ಕಾರ್ಯಕರ್ತರು ತೆರಳುತ್ತಿದ್ದ ಕಾರು ಭೀಕರ ಅಪಘಾತ ➤ ನಾಲ್ವರ ಸ್ಥಿತಿ ಗಂಭೀರ

(ನ್ಯೂಸ್ ಕಡಬ)newskadaba.com ಉತ್ತರಕನ್ನಡ, ಏ.08. ಕಾರು ಮತ್ತು ಟ್ಯಾಂಕರ್​ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಐವರು ಬಿಜೆಪಿ ಕಾರ್ಯಕರ್ತರಿಗೆ ಗಂಭೀರವಾದ ಗಾಯವಾಗಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಶಿರಸಿಯ ಗ್ರಾಮದ ಹಾರೂಗಾರ ಬಳಿ ನಡೆದಿದೆ.

ಅಪಘಾತದಲ್ಲಿ ಬಿಜೆಪಿ ಸದಸ್ಯ ನಿತಿನ್​ ರಾಯ್ಕರ್ ಎಂಬುವರಿಗೆ ಗಂಭೀರ ಗಾಯವಾಗಿದೆ. ಜೊತೆಗಿದ್ದ ವಿ.ಎಂ.ಹೆಗಡೆ, ಪ್ರದೀಪ ಗುನಗಿ, ಗಜಾನನ ರೇವಣಕರ ಹಾಗೂ ಸಂದೇಶ ಎಂಬವರೂ ಗಾಯಗೊಂಡಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಶಿರಸಿಯಲ್ಲಿ ಆಯೋಜಿಸಲಾಗಿದ್ದ ಬಿಜೆಪಿ ಕಾರ್ಯಾಗಾರದಲ್ಲಿ ಭಾಗಿಯಾಗಿದ್ದು, ಬಳಿಕ ಅಲ್ಲಿಂದ ಕಾರವಾರಕ್ಕೆ ಮರಳುತ್ತಿದ್ದಾಗ ಈ ಅಪಘಾತ ಸಂಭವಿಸಿದೆ.

Also Read    ಕೇರಳದ ಮೂಲದ ದಂಪತಿಯ ಮೃತದೇಹ ಲಾಡ್ಜ್ ನಲ್ಲಿ ಪತ್ತೆ

 

error: Content is protected !!
Scroll to Top