(ನ್ಯೂಸ್ ಕಡಬ)Newskadaba.com ವಿಜಯಪುರ,ಏ.07 ಕುಟುಂಬದಲ್ಲಿ ಯಾರಾದರೂ ಸಾವಿಗೀಡಾದಾಗ ಜನನ- ಮರಣ ಪ್ರಮಾಣ ಪತ್ರ ಪಡೆಯುವುದು ಕಡ್ಡಾಯ. ಆದರೆ ತಾಯಿ ನಿಧನರಾದ ಸಂಬಂಧ ಅವರ ಡೆತ್ ಸರ್ಟಿಫಿಕೇಟ್ ಕೊಡಿ ಎಂದು ಜನನ-ಮರಣ ನೋಂದಣಿ ಕಚೇರಿಗೆ ಮಗಳು ಅರ್ಜಿ ಸಲ್ಲಿಸಿದರೆ ಅಲ್ಲಿ ಕಾರ್ಯನಿರ್ವಹಿಸುವ ಮಹಾನುಭಾವ ಸತ್ತವರದ್ದು ಬಿಟ್ಟು, ಅರ್ಜಿ ಕೊಟ್ಟವರ ಮರಣ ಪ್ರಮಾಣ ಪತ್ರ ನೀಡಿ ಬೇಜವಾಬ್ದಾರಿತನ ಮೆರೆದಿದ್ದಾರೆ.
ಒಬ್ಬ ವ್ಯಕ್ತಿ ಬದುಕಿದ್ದಾಗಲೇ ಆತ ಸತ್ತಿದ್ದಾನೆ ಎಂದು ಸುಳ್ಳು ದಾಖಲೆ ಕೊಡುವುದು ಕ್ರಿಮಿನಲ್ ಅಪರಾಧ. ತಪ್ಪು ಯಾವುದೇ ಕಾರಣಕ್ಕೆ ಆಗಿದ್ದರೂ ತಪ್ಪು ತಪ್ಪೇ. ಈ ಪ್ರಕರಣದಲ್ಲಿ ಭಾಗಿಯಾಗಿರುವ ತಪ್ಪಿತಸ್ಥ ಅಧಿಕಾರಿಯನ್ನು ಅಮಾನತು ಮಾಡಬೇಕೆಂದು ತಿಳಿಸಿದ್ದಾರೆ.