ಮದ್ಯದ ಅಮಲಿನಲ್ಲಿ ದೇವಸ್ಥಾನದ ಮುಂದೆ ಕುಣಿದು ಕುಪ್ಪಳಿಸಿದ ASI..!!   ➤ ASI ಅಮಾನತು

(ನ್ಯೂಸ್ ಕಡಬ)Newskadaba.com ಕೇರಳ,ಏ.07   ಮದ್ಯದ ಅಮಲಿನಲ್ಲಿ ಸಮವಸ್ತ್ರದಲ್ಲೇ ದೇವಸ್ಥಾನದ ಮುಂದೆ ಕುಣಿದು ಕುಪ್ಪಳಿಸಿದ ಸಹಾಯಕ ಪೊಲೀಸ್​ ಸಬ್​ ಇನ್ಸ್​ಪೆಕ್ಟರ್​ (ಎಎಸ್​ಐ) ಅನ್ನು ಅಮಾನತು ಮಾಡಿದ ಘಟನೆ ಕೇರಳದಲ್ಲಿ ನಡೆದಿದೆ.

ಸ್ಪೆಷಲ್​ ಬ್ರಾಂಚ್​ ವರದಿಯ ಪ್ರಕಾರ ಇಡುಕ್ಕಿ ಜಿಲ್ಲೆಯ ಸಾಂಥನಪರದ ಎಎಸ್​ಐ ಕೆ.ಪಿ.ಶಾಜಿ ಎಂಬುವರನ್ನು ಅಮಾನತು ಮಾಡಲಾಗಿದೆ. ಪೂಪ್ಪಾರ ಬಳಿ ದೇವಸ್ಥಾನದ ಉತ್ಸವದಲ್ಲಿ ಪೊಲೀಸ್​ ಅಧಿಕಾರಿಯೊಬ್ಬರು ಡಾನ್ಸ್ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಬಳಿಕ ಸ್ಪೆಷಲ್​ ಬ್ರಾಂಚ್​ ತನಿಖೆ ನಡೆಸಿ ವರದಿ ಸಲ್ಲಿಸಿತ್ತು.

Also Read  ನೂಜಿಬಾಳ್ತಿಲ: ಹೆದ್ದಾರಿ ಬದಿಯ ಅಪಾಯಕಾರಿ ಮರ ತೆರವು

ಅಮಾನತಿಗೆ ಮುಖ್ಯ ಕಾರಣವೆಂದರೆ, ಎಎಸ್​ಐ ಕರ್ತವ್ಯದ ಸಮಯದಲ್ಲಿ ಸಮವಸ್ತ್ರದಲ್ಲೇ ಸಾರ್ವಜನಿಕರ ಮುಂದೆ ಡಾನ್ಸ್ ಮಾಡುತ್ತಿರುವುದು ಕಂಡುಬಂದಿದೆ. ಕರ್ತವ್ಯ ಲೋಪ ಎಸಗಿರುವುದು ವರದಿಯಲ್ಲಿ ಸ್ಪಷ್ಟವಾಗಿದೆ.

 

 

 

 

error: Content is protected !!
Scroll to Top