ಮಂಗಳೂರು: ವೀಸಾ ನೀಡುವುದಾಗಿ ನಂಬಿಸಿ ಲಕ್ಷಾಂತರ ರೂ. ವಂಚನೆ..!!   ➤ ಆರೋಪಿ ಸಿಸಿಬಿ ವಶಕ್ಕೆ!  

(ನ್ಯೂಸ್ ಕಡಬ)Newskadaba.com ಮಂಗಳೂರು,ಏ.07  ನಗರದಾದ್ಯಂತ ಸಾರ್ವಜನಿಕರಿಗೆ ಬಲ್ಲೇರಿಯಾ ದೇಶದಲ್ಲಿ ಉದ್ಯೋಗದ ವೀಸಾ ಕೊಡಿಸುವುದಾಗಿ ನಂಬಿಸಿ ಸಾರ್ವಜನಿಕರಿಂದ ಲಕ್ಷಾಂತರ ರೂಪಾಯಿಗಳನ್ನು ಪಡೆದುಕೊಂಡಿದ್ದ ವ್ಯಕ್ತಿಯ ಬಂಧನ. ನಗರದ ಬಿಜೆ ನ್ಯೂ ರೋಡ್ ನಿವಾಸಿ ಸುಧೀರ್ ರಾವ್ ವಿ ಆರ್(42) ವೀಸಾ ಕೂಡಿಸದೇ ವಂಚಿಸುತ್ತಿದ್ದ.

ಈತ ಸಾರ್ವಜನಿಕರಿಂದ ಪಡೆದ ಹಣವನ್ನು ವಾಪಾಸ್ ಅವರಿಗೆ ನೀಡದೆ ಸುಮಾರು 30 ಕ್ಕೂ ಅಧಿಕ ಜನರಿಗೆ ಮೋಸ ಮಾಡಿದ ಆರೋಪಿಯಾಗಿದ್ದಾನೆ.ಮಂಗಳೂರು ನಗರ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಮೋಸ ಮಾಡಿದ ಪ್ರಕರಣಗಳು ದಾಖಲಾಗಿದ್ದು ತಲೆಮರೆಸಿಕೊಂಡು ಓಡಾಡುತ್ತಿದ್ದವನನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

Also Read  ಯುವಜನರ ಮಾರ್ಗದರ್ಶನಕ್ಕೆ ಯುವ ನೀತಿ-2021 ಅಗತ್ಯ ➤ ಜಿಲ್ಲಾಧಿಕಾರಿ ಡಾ. ರಾಜೇಂದ್ರ

 

 

 

 

error: Content is protected !!
Scroll to Top