(ನ್ಯೂಸ್ ಕಡಬ)newskadaba.com ಉಡುಪಿ, ಏ.07. ಉಡುಪಿ ಜಿಲ್ಲೆಯ ವಿವಿಧೆಡೆ ಚುನಾ ವಣೆ ಪೂರ್ವಭಾವಿಯಾಗಿ ಪ್ಯಾರಾ ಮಿಲಿಟರಿ ಪಡೆ, ಪೊಲೀಸ್ ಅಧಿಕಾರಿಗಳು ಹಾಗೂ ಸಿಬಂದಿ ಜಿಲ್ಲೆಯ ವಿವಿಧೆಡೆ ಪಥ ಸಂಚಲನ ನಡೆಸಿದರು ಎಂದು ವರದಿಯಾಗಿದೆ.
ಉಡುಪಿ ವಿಧಾನಸಭಾ ಕ್ಷೇತ್ರಕ್ಕೊಳಪಡುವ ಮಲ್ಪೆ, ಕಾಪು ವಿಧಾನಸಭಾ ಕ್ಷೇತ್ರಕ್ಕೊಳಪಡುವ ಕಾಪು ಪ್ರದೇಶ, ಕಾರ್ಕಳ ವಿಧಾನಸಭಾ ಕ್ಷೇತ್ರಕ್ಕೊಳಪಡುವ ಬೈಲೂರು ಹಾಗೂ ಕಾರ್ಕಳ ಪೇಟೆ, ಬೈಂದೂರು ವಿಧಾನಸಭಾ ಕ್ಷೇತ್ರಕ್ಕೊಳಪಡುವ ಶಿರೂರು ಭಾಗ ಗಳಲ್ಲಿ ಪಥಸಂಚಲನ ಮಾಡಲಾಯಿತು.