ಕೇವಲ 15 ದಿನಗಳ ಅಂತರದಲ್ಲೇ ಪತಿ, ಪತ್ನಿ ನಿಧನ..!!   ➤  ಕಂಗಾಲಾದ ಇಬ್ಬರು ಮಕ್ಕಳು

(ನ್ಯೂಸ್ ಕಡಬ)Newskadaba.com ಮೈಸೂರು,ಏ.07 ಕಾಂಗ್ರೆಸ್ ಮಾಜಿ ಸಂಸದ, ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್‌. ಧ್ರುವನಾರಾಯಣ ಅಗಲಿ ಇನ್ನು ಒಂದು ತಿಂಗಳು ಕಳೆದಿಲ್ಲ. ಈ ದುಃಖ ಮಾಸುವ ಮುನ್ನವೇ ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಧ್ರುವನಾರಾಯಣ ಪತ್ನಿ ವೀಣಾ ವಿಧಿವಶರಾಗಿದ್ದಾರೆ.

 ವೀಣಾ ಧ್ರುವನಾರಾಯಣ ಅವರಿಗೆ 55 ವರ್ಷ ವಯಸ್ಸಾಗಿತ್ತು. ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ವೀಣಾ ಅವರನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಕಳೆದ ಎರಡು ದಿನಗಳಿಂದ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.ಧ್ರುವನಾರಾಯಣ್‌ಗೆ ದರ್ಶನ್ ಮತ್ತು ಧೀರನ್ ಇಬ್ಬರು ಪುತ್ರರನ್ನು ಅಗಲಿದ್ದಾರೆ.

Also Read  ದ್ವಿಚಕ್ರ ವಾಹನಗಳ ನಡುವೆ ಮುಖಾಮುಖಿ ಢಿಕ್ಕಿ  ➤ ಸವಾರ ಮೃತ್ಯು..!   

 

error: Content is protected !!
Scroll to Top