ಬಂಟ್ವಾಳ:  ರೈಲ್ವೆ ಹಳಿಯ ಸಮೀಪ ಅಗ್ನಿ ಅವಘಡ

(ನ್ಯೂಸ್ ಕಡಬ)newskadaba.com ಬಂಟ್ವಾಳ, ಏ.07. ಬಿಸಿರೋಡಿನ ಬ್ರಹ್ಮ ಶ್ರೀ ನಾರಾಯಣ ಗುರು ವೃತ್ತದ ಬಳಿ ರೈಲ್ವೆ ಹಳಿಯ ಸಮೀಪ ಹಾಗೂ ಅದರ ಎದುರು ಬದಿಯ ಹುಲ್ಲಿಗೆ ಆಕಸ್ಮಿಕವಾಗಿ ಬೆಂಕಿ ಬಿದ್ದು ಕೆಲ ಹೊತ್ತು ಬಿಸಿರೋಡಿನಿಂದ ನಂದಾವರಕ್ಕೆ ತೆರಳುವ ರಸ್ತೆ ಬಂದ್ ಆಗಿರುವ ಘಟನೆ ವರದಿಯಾಗಿದೆ.

ರಸ್ತೆಯ ಎರಡೂ ಭಾಗದಲ್ಲಿ ಕಸದ ರಾಶಿ ಬಿದ್ದಿದ್ದು ಕಸದ ರಾಶಿಗೆ ಯಾರೋ ಬೆಂಕಿ ಹಾಕಿರ ಬೇಕು ಎಂದು ಹೇಳಲಾಗುತ್ತಿದ್ದು, ರಸ್ತೆ ತುಂಬಾ ಹೊಗೆ ತುಂಬಿದ್ದು, ಬೆಂಕಿಯ ಜ್ವಾಲೆ ವಿಪರೀತವಾಗಿ ಹರಡಿತ್ತು. ಆದರೆ ಹೇಗೆ ಬೆಂಕಿ ಹತ್ತಿಕೊಂಡಿದೆ ಎಂಬ ಸ್ಪಷ್ಟವಾದ ಮಾಹಿತಿ ಲಭ್ಯವಾಗಿಲ್ಲ.

Also Read  ನಾಳೆ (ಸೆ.27) ಪಾಲಿಟೆಕ್ನಿಕ್ ಸಮ್ಮೇಳನ

ಇನ್ನು ಬಂಟ್ವಾಳ ಅಗ್ನಿಶಾಮಕ ದಳ ಸ್ಥಳಕ್ಕೆ ಆಗಮಿಸಿ ನೀರು ಹಾಯಿಸಿ ಬೆಂಕಿ ನಂದಿಸಲು ಪ್ರಯತ್ನಿಸುತ್ತಿದ್ದಾರೆ. ಸ್ಥಳದಲ್ಲಿ ನೂರಾರು ಜನರು ಜಮಾಯಿಸಿದ್ದು, ಜನರನ್ನು ಬಂಟ್ವಾಳ ನಗರ ಠಾಣಾ ಎಸ್ ಐ ರಾಮಕೃಷ್ಣ ಮತ್ತು ತಂಡದವರು ಚದುರಿಸಿದ್ದಾರೆ.

 

error: Content is protected !!
Scroll to Top