(ನ್ಯೂಸ್ ಕಡಬ)newskadaba.com ಮಂಗಳೂರು, ಏ.07. ದ್ವಿಚಕ್ರ ವಾಹನದಿಂದ ಮಹಿಳೆಯೋರ್ವರು ಬಿದ್ದು ಮೃತಪಟ್ಟ ಘಟನೆ ಕಟೀಲು ಸಮೀಪದ ಕಲ್ಲಕುಮೇರು ಬಳಿ ನಡೆದಿದೆ ಎಂದು ವರದಿ ತಿಳಿಸಿದೆ.
ಮೃತ ಮಹಿಳೆಯನ್ನು ಕಾರ್ಕಳದ ಈದು ಗ್ರಾಮದ ಮಮತಾ ಶೆಟ್ಟಿ (35) ಎಂದು ಗುರುತಿಸಲಾಗಿದೆ. ಮಮತಾ ಕಾರ್ಕಳದಿಂದ ಕಟೀಲಿಗೆ ತನ್ನ ಪತಿಯ ಜೊತೆ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದರು. ವೇಗವಾಗಿ ಬರುತ್ತಿದ್ದ ದ್ವಿಚಕ್ರವಾಹನ ಕಲ್ಲಕುಮೇರು ಬಳಿ ಹಂಪ್ಸ್ ಗಮನಿಸದ ಹಿನ್ನೆಲೆ ವೇಗವಾಗಿ ಬಂದ ಕಾರಣ ಮಮತಾ ದ್ವಿಚಕ್ರ ವಾಹನದಿಂದ ಬಿದ್ದು ಮೃತಪಟ್ಟಿದ್ದಾರೆ ಎನ್ನಲಾಗಿದೆ.
Also Read ಮಂಗಳೂರು:ಕೆನರಾ ಎಂಜಿನಿಯರಿಂಗ್ ಕಾಲೇಜಿನ ಅಶ್ವಿನಿ ಹೊಳ್ಳ ►ಅವರಿಗೆ ಐಇಇಇ ಅತ್ಯುತ್ತಮ ಘಟಕ ಕೌನ್ಸಿಲರ್ ಗೌರವ