ಮದ್ಯ ಸೇವಿಸಿ ಪರಸ್ಪರ ವಿವಾಹವಾದ ಯವಕರು..!!   ➤ದೂರು ದಾಖಲು

(ನ್ಯೂಸ್ ಕಡಬ)Newskadaba.com  ತೆಲಂಗಾಣ,ಏ.06  ತೆಲಂಗಾಣದ ಮೇಡಕ್ ಜಿಲ್ಲೆಯಿಂದ ಒಂದು ವಿಚಿತ್ರ ಘಟನೆ ನಡೆದಿದೆ.ಇಬ್ಬರು ಯುವಕರು ದಾಂಪಲಕುಂಟಾದಲ್ಲಿರುವ ಮದ್ಯದಂಗಡಿಯಲ್ಲಿ  ವಿಪರೀತ ಸಾರಾಯಿ ಸೇವನೆ ಮಾಡಿ ಬಳಿಕ ಕುಡಿದ ಮತ್ತಿನಲ್ಲಿಯೇ ಪರಸ್ಪರ ವಿವಾಹ ಮಾಡಿಕೊಂಡಿದ್ದಾರೆ. ಈ ಸುದ್ದಿ ತಿಳಿಯುತ್ತಿದ್ದಂತೆ ಇಬ್ಬರ ಕುಟುಂಬ ಸದಸ್ಯರು ಬೆಚ್ಚಿಬಿದ್ದಿದ್ದಾರೆ.

ಮದುವೆಯಾದ ಮರುದಿನ ಯುವಕ ಚಂದೂರು ಗ್ರಾಮದ ಯುವಕನ ಮನೆಗೆ ಹೋಗಿ ನಿಮ್ಮ ಮಗನ ಜೊತೆಗೆ ನನ್ನ ಮದುವೆಯಾಗಿದೆ ಹೀಗಾಗಿ ಮನೆಗೆ ಬಂದಿರುವುದಾಗಿ ಹೇಳಿದ್ದಾನೆ. ಇದನ್ನು ಕೇಳಿ ಪೋಷಕರು ಯುವಕನನ್ನು ಮನೆಗೆ ಹೋಗೆಂದು ಹೇಳಿದ್ದಾರೆ, ಕೇಳದ ಯುವಕ ಒಂದು ಲಕ್ಷ ರೂಪಾಯಿ ಕೊಟ್ಟರೆ ಹೋಗುತ್ತೇನೆ ಎಂದು ಹೇಳಿದ್ದಾನೆ. ಚಂದೂರು ನಿವಾಸಿ ಪೋಷಕರು ತನ್ನ ಮಾತು ಕೇಳದಿದ್ದಾಗ ಯುವಕ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾನೆ.

Also Read  ಕೇರಳ: ಆ್ಯಂಬುಲೆನ್ಸ್‌ ಸಂಚಾರಕ್ಕೆ ಅಡ್ಡಿಪಡಿಸಿದ ಚಾಲಕನಿಗೆ 2.5 ಲಕ್ಷ ರೂ. ದಂಡ

 

 

 

error: Content is protected !!
Scroll to Top