(ನ್ಯೂಸ್ ಕಡಬ)Newskadaba.com ಬೆಂಗಳೂರು,ಏ.06 ಬರೋಬ್ಬರಿ 10 ರಾಜ್ಯಗಳಲ್ಲಿ 27 ಮಹಿಳೆಯರನ್ನು ಮದುವೆಯಾಗಿ ಲಕ್ಷಾಂತರ ರೂಪಾಯಿ ವಂಚಿಸಿದ್ದ ರಮೇಶ್ ಸ್ವೇನ್ ಎಂಬಾತನನ್ನು ಜಾರಿ ನಿರ್ದೇಶನಾಲಯ ಬಂಧಿಸಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ರಮೇಶ್‌ನನ್ನು ಓಡಿಶಾ ಪೊಲೀಸರು ಬಂಧಿಸಿದ್ದರು.
ಈಗ ಮಹಾವಂಚಕನ ವಿರುದ್ಧ ಇಡಿ ಅಕ್ರಮ ಹಣ ವರ್ಗಾವಣೆ ಪ್ರಕರಣವನ್ನು ದಾಖಲಿಸಿದೆ.ಇಡಿ ಬಂಧಿಸಿರುವ ರಮೇಶ್ ಸ್ವೇನ್ ಅಪರಾಧ ಹಿನ್ನೆಲೆಯನ್ನು ಗಮನಿಸಿದರೆ ಹಲವು ಆಘಾತಕಾರಿ ಸಂಗತಿಗಳು ಬೆಳಕಿಗೆ ಬರುತ್ತವೆ.