(ನ್ಯೂಸ್ ಕಡಬ)newskadaba.com ಬೆಂಗಳೂರು, ಏ.06. ಶಾಲಾ ಶಿಕ್ಷಣ ಇಲಾಖೆಯು ರಾಜ್ಯ ಪಠ್ಯಕ್ರಮದ 5 ಮತ್ತು 8 ನೇ ತರಗತಿ ಮಕ್ಕಳಿಗೆ ನಡೆಸಿರುವ ಮೌಲ್ಯಾಂಕನ ಪರೀಕ್ಷೆಗೆ ಗ್ರೇಡ್ ನಿಗದಿ ಮಾಡಿದ್ದು, ಯಾವುದೇ ವಿದ್ಯಾರ್ಥಿಯನ್ನು ಅನುತ್ತೀರ್ಣ ಮಾಡುವಂತಿಲ್ಲ ಎಂಬ ಸೂಚನೆ ನೀಡಿದೆ.
ಮೌಲ್ಯಾಂಕನ ಪರೀಕ್ಷೆಗಳನ್ನು 40 ಅಂಕಗಳ ಲಿಖಿತ ಮೌಲ್ಯಂಕನ ಮತ್ತು ಶಾಲಾ ಹಂತದಲ್ಲಿ 10 ಅಂಕಗಳ ಮೌಖಿಕ ಮೌಲ್ಯಾಂಕನದಲ್ಲಿ ನಡೆಸಲಾಗಿದೆ. ಒಟ್ಟಾರೆ 50 ಅಂಕಗಳಲ್ಲಿ ವಿದ್ಯಾರ್ಥಿ ಗಳಿಸಿ ಅಂಕಗಳನ್ನು 20 ಅಂಕಗಳಿಗೆ ಪರಿವರ್ತಿಸಿ ಗ್ರೇಡ್ ನೀಡಲಾಗುತ್ತದೆ.