ಚುನಾವಣಾ ಆಯೋಗದಿಂದ ಭರ್ಜರಿ ಬೇಟೆ ➤ ರಾಜ್ಯಾದ್ಯಂತ 69.36 ಕೋಟಿ ರೂ.ಜಪ್ತಿ

(ನ್ಯೂಸ್ ಕಡಬ)newskadaba.com ಬೆಂಗಳೂರು, ಏ.06. ಕರ್ನಾಟಕ ವಿಧಾನಸಭೆ ಚುನಾವಣಾ ನೀತಿ ಸಂಹಿತೆ ಜಾರಿಯಾದ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ರಾಜ್ಯಾದ್ಯಂತ ನಗದು, ಮದ್ಯ, ಉಡುಗೊರೆ, ಮಾದಕವಸ್ತುಗಳು ಸೇರಿದಂತೆ ಒಟ್ಟು 69.36 ಕೋಟಿ ರೂ. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿವೆ.

ರಾಜ್ಯದ ನಾನಾ ಭಾಗಗಳಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಅಪಾರ ಪ್ರಮಾಣದ ಮದ್ಯ ಮತ್ತಿತರ ಸಾಮಗ್ರಿಗಳನ್ನು ಚುನಾವಣಾ ಜಾಗೃತ ದಳಗಳು ಜಪ್ತಿ ಮಾಡಿದ್ದು, ಈವರೆಗೆ 22.75 ಕೋಟಿ ರೂ. ನಗದು ಸೇರಿ 69.36 ಕೋಟಿ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

Also Read  ಇಬ್ಬರು ಯುವಕರ ಮೇಲೆ ಚಾಕು ಇರಿತ..!!   ➤ ದೂರು ದಾಖಲು

 

error: Content is protected !!
Scroll to Top