ಪುತ್ತೂರು: ‘ಶಾಸಕರ ಜೊತೆಗಿನ ಫೋಟೋ ಎಡಿಟ್ ಮಾಡಿದ್ದು’ ➤ ಸೂಕ್ತ ಶಿಕ್ಷೆಗೆ ಆಗ್ರಹಿಸಿದ ಮಹಿಳೆ

(ನ್ಯೂಸ್ ಕಡಬ)newskadaba.com ಪುತ್ತೂರು, ಏ.06.  “ಶಾಸಕ ಸಂಜೀವ ಮಠಂದೂರು ಜೊತೆಗಿರುವ ಪೊಟೋ ಎಡಿಟ್ ಮಾಡಿದ್ದು, ಅದನ್ನು ವೈರಲ್ ಮಾಡಿದವರಿಗೆ ಸೂಕ್ತ ಶಿಕ್ಷೆ ಆಗಬೇಕು” ಎಂದು ಮಹಿಳೆಯೊಬ್ಬರು ಆಗ್ರಹಿಸಿದ್ದಾರೆ.

ಈ ಕುರಿತು ಮಾಧ್ಯಮಕ್ಕೆ ಪ್ರತಿಕ್ರಿಯಿಸಿರುವ ಮಹಿಳೆ, “ನನ್ನ ವೈಯುಕ್ತಿಕ ಫೋಟೋಗಳನ್ನು ಪುತ್ತೂರಿನ ಶಾಸಕರ ಜೊತೆ ಹೊಂದಾಣಿಕೆ ಮಾಡಿಕೊಂಡು ವೈರಲ್ ಮಾಡುತ್ತಿದ್ದಾರೆ. ಇದರಿಂದಾಗಿ ನನಗೆ ಮತ್ತು ಮನೆ ಮಂದಿಗೆ ತುಂಬಾ ನೋವಾಗಿದ್ದು, ಮಹಿಳೆಯಾಗಿ ನನ್ನ ಮೇಲೆ ದೌರ್ಜನ್ಯ ಮಾಡುವುದು ತಪ್ಪು” ಎಂದಿದ್ದಾರೆ.

ಇನ್ನು “ನನಗೂ ಶಾಸಕರಿಗೆ ಯಾವುದೇ ರೀತಿಯ ಸಂಬಂಧವಿಲ್ಲ. ಅದೂ ಅಲ್ಲದೆ ಓರ್ವ ಮಹಿಳೆಯ ಮೇಲೆ ಇಷ್ಟು ದೊಡ್ಡ ಆರೋಪ ಸರಿಯಲ್ಲ. ಇದರ ಹಿಂದೆ ಇರುವವರ ವಿರುದ್ದ ಸೂಕ್ತ ಶಿಕ್ಷೆ ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದ್ದಾರೆ.

Also Read  4 ವರ್ಷದ ಮಕ್ಕಳು ಸೇರಿ ಎಲ್ಲರಿಗೂ ಹೆಲ್ಮೆಟ್ ಕಡ್ಡಾಯ

 

 

error: Content is protected !!
Scroll to Top