ತಲೆಗೂದಲು ಚಿಕ್ಕದಾಗಿ ಕತ್ತರಿಸಿದ್ದಕ್ಕೆ ಮನನೊಂದ ಬಾಲಕ ಆತ್ಮಹತ್ಯೆ!

(ನ್ಯೂಸ್ ಕಡಬ) newskadaba.com. ಮುಂಬೈ, ಏ.6. ಹೇರ್‌ಕಟ್‌ ಮಾಡಿಸಲು ಹೋಗಿದ್ದ ಬಾಲಕನೊಬ್ಬ ತನಗೆ ಸರಿಯಾಗಿ ಕ್ಷೌರ ಮಾಡಿಲ್ಲ ಎಂದು ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮುಂಬೈನಲ್ಲಿ ನಡೆದಿದೆ. ಮಹಾರಾಷ್ಟ್ರದ ಭಾಯಂದರ್‌ ಪ್ರದೇಶದ 13 ವರ್ಷದ ಬಾಲಕ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ವರದಿಯಾಗಿದೆ.

ಈತ ಮಂಗಳವಾರ ತನ್ನ ಸೋದರ ಸಂಬಂಧಿಯ ಹುಡುಗನ ಜೊತೆಗೆ ಮನೆಯ ಸಮೀಪ ಇರುವ ಮೆನ್ಸ್ ಸೆಲೂನ್‌ಗೆ ಹೇರ್‌ ಕಟ್ ಮಾಡಲು ಹೋಗಿದ್ದ. ಅಲ್ಲದೇ ತನಗೆ ಬೇಕಾದಂತೆ ಹೇರ್‌ಕಟ್ ಮಾಡಲು ಸೂಚಿಸಿದ್ದ.  ಆದರೆ ಸೆಲೂನ್‌ನಲ್ಲಿದ್ದ ಕ್ಷೌರಿಕ ಮಾಡಿದ ಹೇರ್‌ಕಟ್‌ನಿಂದ ಅಸಮಾಧಾನಗೊಂಡ ಬಾಲಕ ಮನೆಗೆ ಬಂದು ನೋಡಿದಾಗ ಚಿಕ್ಕ ಕೂದಲನ್ನು ನೋಡಿ ತೀವ್ರ ಬೇಸರಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

Also Read  ಕಾಶ್ಮೀರದಲ್ಲಿ ಮುಂದುವರಿದ ಉಗ್ರರ ಬೇಟೆ, ಇಂದು ಇಬ್ಬರು ಭಯೋತ್ಪಾದಕರು ಫಿನಿಶ್

error: Content is protected !!
Scroll to Top