ಕಬ್ಬನ್ ಪಾರ್ಕ್‌ನಲ್ಲಿ ಅಸಭ್ಯ ವರ್ತನೆ ತಡೆಯಲು ಹೊಸ ಪ್ಲ್ಯಾನ್!!   ➤ ಭದ್ರತಾ ಸಿಬ್ಬಂದಿ ಧ್ವನಿವರ್ಧಕ ಬಳಸಿ ಎಚ್ಚರಿಕೆ.!!

(ನ್ಯೂಸ್ ಕಡಬ)Newskadaba.com ಬೆಂಗಳೂರು,ಏ.06 ಕಬ್ಬನ್ ಉದ್ಯಾನದಲ್ಲಿ ವಯಸ್ಕರ ಅಸಭ್ಯ ವರ್ತನೆಯನ್ನು ನಿಯಂತ್ರಿಸಲು ಭದ್ರತಾ ಸಿಬ್ಬಂದಿಗೆ ತೋಟಗಾರಿಕೆ ಇಲಾಖೆ ಧ್ವನಿವರ್ಧಕ ಗಳನ್ನು ನೀಡಿದೆ.

‘ಉದ್ಯಾನಕ್ಕೆ ಬರುವ ಕೆಲವರ ವರ್ತನೆ ಮಿತಿ ಮೀರಿತ್ತು. ಕೆಲವು ಯುವಕ-ಯುವತಿಯರು ಮನ
ಬಂದಂತೆ ಅಸಭ್ಯವಾಗಿ ವರ್ತಿಸುತ್ತಿದ್ದಾರೆ.ಕುಟುಂಬ ಸಮೇತ ಉದ್ಯಾನಕ್ಕೆ ಬರುವ ಹಿರಿಯರಿಗೆ, ಮಕ್ಕಳಿಗೆ, ಮಹಿಳೆಯರಿಗೆ ಇದು ಕಿರಿಕಿರಿಯಾಗುತ್ತಿತ್ತು.

ಇದನ್ನು ತಡೆಯಲು ಭದ್ರತಾ ಸಿಬ್ಬಂದಿ ಧ್ವನಿವರ್ಧಕ ಬಳಸಿ ಎಚ್ಚರಿಕೆ ನೀಡುತ್ತಿದ್ದಾರೆ. ಉದ್ಯಾನದಲ್ಲಿ ಇಂತಹ ಅಸಭ್ಯ ವರ್ತನೆಗಳಿಗೆ ಕಡಿವಾಣ ಬಿದ್ದಂತಾಗಿದೆ. ತೋಟಗಾರಿಕೆ ಇಲಾಖೆಯ ಈ ನೂತನ ಕ್ರಮ ಶ್ಲಾಘನೀಯ’ ಎಂದು ಕಬ್ಬನ್ ಉದ್ಯಾನದ ನಡಿಗೆದಾರ ಸಂತೋಷ್ ಕುಮಾರ್ ತಿಳಿಸಿದರು.

Also Read  ಕುಮಟಾದಲ್ಲಿ 11ನೇ ಶತಮಾನದ ಅಪೂರ್ವ ಶಿಲ್ಪ ಪತ್ತೆ   

 

 

 

 

 

 

error: Content is protected !!
Scroll to Top