ಬೆಳ್ತಂಗಡಿ: ನೈತಿಕ ಪೊಲೀಸ್ ಗಿರಿ ➤ ನಾಲ್ವರು ಅರೆಸ್ಟ್..!

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಏ. 06. ನೈತಿಕ ಪೊಲೀಸ್ ಗಿರಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ ಕುರಿತು ಚಾರ್ಮಾಡಿಯಲ್ಲಿ ನಡೆದಿದೆ.

 

 

ಬಂಧಿತರನ್ನು ದಿನೇಶ್, ಸಚಿನ್, ನಿತೇಶ್ ತೋಟಂತಾಡಿ, ಅವಿನಾಶ್ ಯಾನೆ ರಾಹುಲ್ ಎಂದು ಗುರುತಿಸಲಾಗಿದೆ. ಕಕ್ಕಿಂಜೆ ನಿವಾಸಿ ಮೊಹಮ್ಮದ್ ಶಾಹಿಲ್ ಎಂಬಾತ ಬಸ್ ನಲ್ಲಿ  ತೆರಳುತ್ತಿದ್ದ ವೇಳೆ ಪರಿಚಯದ ಯುವತಿಯೊಂದಿಗೆ ಮಾತನಾಡಿದ್ದು, ಯುವತಿ ಬೆಳ್ತಂಗಡಿಯಲ್ಲಿ ಇಳಿದು ಮನೆಗೆ ತೆರಳಿದ್ದಳು. ವಿಚಾರ ತಿಳಿದ ನಾಲ್ವರು ಯುವಕರ ತಂಡವು ಬಸ್ ನಿಂದ ಆತನನ್ನು ಕೆಳಗಿಳಿಸಿ ಹಲ್ಲೆ ಮಾಡಿದೆ ಎಂದು ಆರೋಪಿಸಿ, ಬೆಳ್ತಂಗಡಿ ಠಾಣೆಯಲ್ಲಿ ದೂರು ನೀಡಲಾಗಿತ್ತ. ಇದೀಗ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ ಎನ್ನಲಾಗಿದೆ.

Also Read  ಶರವೂರು: ಶಾಲೆಯಲ್ಲಿ ಪ್ರತಿಭೋತ್ಸವ ಕಾರ್ಯಕ್ರಮ

 

error: Content is protected !!
Scroll to Top