ಸುಬ್ರಹ್ಮಣ್ಯ: ಕುಕ್ಕೆಯಲ್ಲಿ ಸಾವಿರಾರು ಮತ್ಸ್ಯಗಳ ಮಾರಣಹೋಮ

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಏ. 06. ಪವಿತ್ರ ಕ್ಷೇತ್ರ ಶ್ರೀ ಕುಕ್ಕೆ ಸುಬ್ರಹ್ಮಣ್ಯ ಸುತ್ತಲ ಕುಮಾರ ಪರ್ವತದಿಂದ ಹರಿದು ಬರುವ ನೀರು ಇಲ್ಲಿಯ ಬಾಬುರಾಯನ ಗುಂಡಿ ಎಂಬಲ್ಲಿ ಮಲಿನಗೊಂಡಿರುವ ನೀರಿನಿಂದಾಗಿ ಸಾವಿರಾರು ಮೀನುಗಳು ಸತ್ತು ತೇಲುತ್ತಿರುವ ದೃಶ್ಯ ಕಂಡುಬಂದಿದೆ.

ಆದಿಸುಬ್ರಮಣ್ಯದಿಂದ ದರ್ಪಣ ತೀರ್ಥ ಸಮೀಪದ ಬಾಬುರಾಯನಗುಂಡಿ ಎಂಬಲ್ಲಿ ಈ ಘಟನೆ ನಡೆದಿದೆ. ಇದೇ ನೀರು ಕುಕ್ಕೆ ಸುಬ್ರಮಣ್ಯದ ಕುಮಾರಧಾರ ನದಿಗೆ ಸೇರುತ್ತದೆ ಎನ್ನಲಾಗಿದೆ. ಹೋಟೆಲ್ ಹಾಗೂ ಲಾಡ್ಜ್ ಗಳಿಂದ ಬರುವಂತಹ ಈ ಕಲುಷಿತ ನೀರಿನಿಂದಾಗಿ ಎಲ್ಲೆಂದರಲ್ಲಿ ಬಿಸಾಡಿರುವಂತಹ ಕಸದ ರಾಶಿಗಳು ಕೇವಲ ಜಲಚರಗಳಿಗೆ ಮಾತ್ರವಲ್ಲದೆ ಇದರಿಂದಾಗಿ ಹೊರಬರುವ ದುರ್ವಾಸನೆ ಇಂದ ಸುತ್ತಮುತ್ತಲಿನ ಪ್ರದೇಶದಲ್ಲಿ ವಾಸಿಸುತ್ತಿರುವ ಜನರಿಗೆ ಭಾರಿ ಸಮಸ್ಯೆ ಉಂಟಾಗುತ್ತಿದೆ.

Also Read  ಕಡಬ: ಧ್ವಜಾರೋಹಣದ ಸಿದ್ಧತೆ ವೇಳೆ ಕುಸಿದು ಬಿದ್ದ ನಿವೃತ್ತ ಯೋಧ ➤‌ ಆಸ್ಪತ್ರೆಗೆ ಸಾಗಿಸುವ ವೇಳೆ ಮೃತ್ಯು

error: Content is protected !!
Scroll to Top