ಮಂಗಳೂರು: ಜಾನುವಾರು ಕಳ್ಳತನ ಆರೋಪ..! ➤ ಇಬ್ಬರ ಬಂಧನ

(ನ್ಯೂಸ್ ಕಡಬ)newskadaba.com ಮಂಗಳೂರು, ಏ.06. ಗೋ ಕಳ್ಳತನ‌ದ ಆರೋಪದಲ್ಲಿ ಇಬ್ಬರನ್ನು ಬಂಧಿಸಿರುವ ಘಟನೆ ಕಾವೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಬಂಟ್ವಾಳ ತಾಲೂಕಿನ ಅಮ್ಮೆಮಾರ್ ನಿವಾಸಿ ಸಾಹುಲ್ ಹಮೀದ್(33) ಮತ್ತು ಮಹಮ್ಮದ್ ಸಾದಿಕ್ ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆ.

ಆರೋಪಿಗಳು ಕಾವೂರು ಗಾಂಧಿನಗರದಲ್ಲಿ ಗೋವಿನ ಕರುವನ್ನು ಕಳವು ಮಾಡಿದ್ದರು ಎನ್ನಲಾಗಿದೆ. ಬಂಧನದ ವೇಳೆ ಪೊಲೀಸರು ಆರೋಪಿಗಳಿಂದ 1,50,000 ಮೌಲ್ಯದ ಕಾರನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳ ವಿರುದ್ಧ ಪುತ್ತೂರು, ಬಂಟ್ವಾಳ, ಬೆಳ್ತಂಗಡಿ ಠಾಣೆಗಳಲ್ಲಿ ಈ ಮೊದಲು ಪ್ರಕರಣ ದಾಖಲಾಗಿತ್ತು ಎಂದು ವರದಿ ತಿಳಿಸಿದೆ.

Also Read  ರಾಷ್ಟ್ರೀಯ ಆಯುರ್ವೇದ ದಿನಾಚರಣೆ; ಅಸಮರ್ಪಕ ಜೀವನಶೈಲಿಯಿಂದ ಆರೋಗ್ಯಕ್ಕೆ ಆಪತ್ತು- ಮಮತಾ ಗಟ್ಟಿ

 

error: Content is protected !!
Scroll to Top