ಬೆಂಗಳೂರು-ಮೈಸೂರು ನಡುವೆ ಹೆಚ್ಚುವರಿ ರೈಲು ಸೇವೆಗೆ ಬೇಡಿಕೆ

(ನ್ಯೂಸ್ ಕಡಬ)newskadaba.com ಮೈಸೂರು, ಏ.05. ಸಂಪೂರ್ಣ ವಿದ್ಯುದೀಕರಣಗೊಂಡ ಡಬಲ್‌ ಲೈನ್‌ ಬ್ರಾಡ್‌ಗೇಜ್‌ ಬೆಂಗಳೂರು-ಮೈಸೂರು ರೈಲು ಮಾರ್ಗದಲ್ಲಿ ಸಾಮರ್ಥ್ಯಕ್ಕೆ ಅನುಗುಣವಾಗಿ ರೈಲುಗಳ ಸಂಖ್ಯೆ ಹೆಚ್ಚಿಸಬೇಕೆಂಬ ಒತ್ತಾಯ ಕೇಳಿಬಂದಿದೆ ಎಂದು ವರದಿಯಾಗಿದೆ.

140 ಕಿ.ಮೀ. ಉದ್ದದ ಬೆಂಗಳೂರು-ಮೈಸೂರು ಡಬಲ್‌ ಲೈನ್‌ ಯೋಜನೆ ಪೂರ್ಣಗೊಳಿಸುವ ವೇಳೆಗೆ ವೆಚ್ಚ ಅಂದಾಜಿಗಿಂತ ದುಪ್ಪಟ್ಟಾಗಿದೆ. ಈ ಮಾರ್ಗದ ಸಾಮರ್ಥ್ಯಕ್ಕೆ ಅನುಗುಣವಾಗಿ ರೈಲುಗಳ ಸಂಚಾರಕ್ಕೆ ಕ್ರಮ ವಹಿಸಿಲ್ಲ. ಈ ಮಾರ್ಗದಲ್ಲಿ 24 ಗಂಟೆ ಅವಧಿಯಲ್ಲಿ ಇನ್ನು ಹೆಚ್ಚಿನ ರೈಲುಗಳ ಸಂಚಾರಕ್ಕೆ ಅವಕಾಶವಿದೆ. ಆದರೆ, ಪ್ರಸ್ತುತ ಶೇ. 65ರಿಂದ 70ರಷ್ಟು ರೈಲುಗಾಡಿಗಳ ಸಂಚಾರವಾಗುತ್ತಿದೆ.

error: Content is protected !!
Scroll to Top