ತಡವಾಗಿ ಬಂದ ಆಂಬ್ಯುಲೆನ್ಸ್   ➤ ಹೊಟ್ಟೆ ನೋವಿನಿಂದ 23 ವರ್ಷದ ಗರ್ಭಿಣಿ ಮೃತ್ಯು.!!  

(ನ್ಯೂಸ್ ಕಡಬ)Newskadaba.com ನವದೆಹಲಿ,ಏ.05 108 ಆಂಬ್ಯುಲೆನ್ಸ್ ಬರುವುದು ವಿಳಂಬವಾದ ಕಾರಣ ಟಿ.ಸಂಧ್ಯಾ (23) ಮಂಡಗಮೇಡು ಗ್ರಾಮದ ನಿವಾಸಿ  ಪ್ರಾಣ ಕಳೆದುಕೊಂಡಿರುವ ದಾರುಣ ಘಟನೆ ವಿಲ್ಲುಪುರಂ ಜಿಲ್ಲೆಯ ತಿರುವೆನ್ನೈನಲ್ಲೂರಿನಲ್ಲಿ ನಡೆದಿದೆ.

ನಾಲ್ಕು ತಿಂಗಳ ಗರ್ಭಿಣಿಯಾಗಿದ್ದ ಟಿ.ಸಂಧ್ಯಾರವರು ರಾತ್ರಿ ಹೊಟ್ಟೆ ನೋವಿನಿಂದ ಬಳಲುತ್ತಿದ್ದರು ಅವರನ್ನು ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಗಿದೆ.ಅಲ್ಲಿನ ವೈದ್ಯರು ಆಕೆಗೆ ತುರ್ತು ವೈದ್ಯಕೀಯ ಚಿಕಿತ್ಸೆಯ ಅಗತ್ಯವಿದೆ ಎಂದು ತಿಳಿಸಿದ್ದಾರೆ.

ತಕ್ಷಣವೇ ಅವರನ್ನು ಮುಂಡಿಯಂಬಕ್ಕಂ ಸರ್ಕಾರಿ ಆಸ್ಪತ್ರೆಗೆ ವರ್ಗಾಯಿಸಲು ಶಿಫಾರಸು ಮಾಡಿದ್ದಾರೆ. ಆದರೆ, ಆಂಬ್ಯುಲೆನ್ಸ್ ಎರಡು ಗಂಟೆಗಳ ವಿಳಂಭವಾಗಿ ಬಂದಿರುವುದರಿಂದ ಈ ಘಟನೆ ಸಂಭವಿಸಿದೆ ಎಂದು ಪೋಲೀಸರು ತಿಳಿಸಿದ್ದಾರೆ.

Also Read  RBI ಪ್ರಧಾನ ಕಛೇರಿಗೆ ರಷ್ಯನ್ ಭಾಷೆಯಲ್ಲಿ ಬಾಂಬ್ ಬೆದರಿಕೆ

 

 

 

error: Content is protected !!
Scroll to Top