(ನ್ಯೂಸ್ ಕಡಬ)newskadaba.com ಸಿಕ್ಕಿಂ, ಏ.05. ಸಿಕ್ಕಿಂನ ನಾಥು ಲಾ ಪರ್ವತ ಪಾಸ್ನಲ್ಲಿ ಸಂಭವಿಸಿದ ಭಾರಿ ಹಿಮಪಾತದಲ್ಲಿ ಹಲವಾರು ಪ್ರವಾಸಿಗರು ಸಿಲುಕಿಸಿ ಆರು ಮಂದಿ ಮೃತಪಟ್ಟು, 11 ಮಂದಿ ಗಾಯಗೊಂಡಿದ್ದಾರೆ ತಿಳಿದು ಬಂದಿದೆ.
ಈ ಕುರಿತು ಅಧಿಕಾರಿಗಳು ಮಾಹಿತಿ ನೀಡಿದ್ದು, ಹಿಮಪಾತ ಸಂಭವಿಸಿದಾಗ 150ಕ್ಕೂ ಹೆಚ್ಚು ವಿಹಾರಿಗರು ಈ ಪ್ರದೇಶದಲ್ಲಿದ್ದರು ಎಂದು ವರದಿಯಾಗಿರುವುದರಿಂದ ರಕ್ಷಣಾ ಕಾರ್ಯಾಚರಣೆ ತಂಡವನ್ನ ಸ್ಥಳ ತಲುಪಿದ್ದು, ರಕ್ಷಣಾ ಕಾರ್ಯ ಪ್ರಾರಂಭಿಸಿದೆ ಎಂದರು.
