SSLC ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ   ➤ಇಬ್ಬರ ಬಂಧನ

(ನ್ಯೂಸ್ ಕಡಬ)Newskadaba.com ನವದೆಹಲಿ, ಏ.05 10ನೇ ತರಗತಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ತೆಲಂಗಾಣ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಸಂಸದ ಬಂಡಿ ಸಂಜಯ್ ಅವರನ್ನು ಬಂಧಿಸಲಾಗಿದೆ. ಬಂಧನದ ವೇಳೆ ಕರೀಂನಗರದಲ್ಲಿರುವ ಸಂಸದ ಸಂಜಯ್ ಅವರ ನಿವಾಸದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿತ್ತು.

ಕಾರ್ಯಕರ್ತರು ಪೊಲೀಸರ ನಡುವೆ ಮಾತಿನ ಚಕಮಕಿ ನಡೆದು ಬಿಗುವಿನ ವಾತಾವರಣ ನಿರ್ಮಾಣವಾಗಿದೆ.ತಮ್ಮ ನಾಯಕನನ್ನು ಏಕೆ ಬಂಧಿಸಲಾಗುತ್ತಿದೆ ಎಂದು ಬಿಜೆಪಿ ಕಾರ್ಯಕರ್ತರು ಸಿಐ ದಾಮೋದರ್ ಅವರನ್ನು ಪ್ರಶ್ನಿಸಿದರು. ಏತನ್ಮಧ್ಯೆ, ಸಂಜಯ್‌ಗೆ 151 ಸಿಆರ್‌ಪಿಸಿ ನೋಟಿಸ್‌ಗಳನ್ನು ನೀಡಲಾಗಿದೆ. ಬಂಡಿ ಸಂಜಯ್‌ ಅವರನ್ನು ನಲ್ಗೊಂಡ ಜಿಲ್ಲೆಯ ಬೊಮ್ಮಲರಾಮರಂ ಪೊಲೀಸ್ ಠಾಣೆಗೆ ಸ್ಥಳಾಂತರಿಸಲಾಗಿದೆ.

Also Read  ಮಲಯಾಳಂ ನಟ ಮೋಹನ್ ರಾಜ್ ನಿಧನ

 

 

 

 

 

 

 

 

error: Content is protected !!
Scroll to Top