(ನ್ಯೂಸ್ ಕಡಬ)newskadaba.com ಛತ್ತೀಸ್ ಗಢ, ಏ.05. ಮದುವೆಗೆ ನಾನಾ ರೀತಿಯ ಉಡುಗೊರೆಗಳು ಬರೋದು ಸಾಮಾನ್ಯವಾಗಿದ್ದು, ಸಂತಸದ ಸಮಾರಂಭದಲ್ಲಿ ಸೂತಕದ ವಾತಾವರಣ ಏರ್ಪಟ್ಟಿದೆ. ಛತ್ತೀಸ್‌ಗಢದಲ್ಲಿ ದುರಂತ ಘಟನೆ ನಡೆದಿದೆ.
ಮದುವೆ ಉಡುಗೊರೆಯಾಗಿ ಪಡೆದ ಹೋಮ್ ಥಿಯೇಟರ್ ಮ್ಯೂಸಿಕ್ ಸಿಸ್ಟಮ್ ಮನೆಯಲ್ಲೇ ಸ್ಫೋಟಗೊಂಡಿದೆ. ಈ ಘಟನೆಯಲ್ಲಿ ಇಬ್ಬರು ಮೃತಪಟ್ಟಿದ್ದು ಮತ್ತು ನಾಲ್ವರು ಗಂಭೀರ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.