ಮೂಡುಬಿದಿರೆ: ಕೃಷಿ ತಜ್ಞ  ಡಾ.ಎಲ್.ಸಿ. ಸೋನ್ಸ್ ನಿಧನ..!!

(ನ್ಯೂಸ್ ಕಡಬ)Newskadaba.com ಮೂಡುಬಿದಿರೆ,ಏ.05 ಕೃಷಿ ತಜ್ಞ ಮೂಡುಬಿದಿರೆಯ ಬನ್ನಡ್ಕದ ಸೋನ್ಸ್ ಫಾರ್ಮ್ ನ ಕೃಷಿ ಋಷಿ ಡಾ. ಎಲ್. ಸಿ. ಸೋನ್ಸ್ ಅವರು ಎ.5 ಬುಧವಾರ ಮುಂಜಾನೆ ಸ್ವಗೃಹದಲ್ಲಿ ನಿಧನ ಹೊಂದಿದರು. ಕೃಷಿರಂಗದಲ್ಲಿ ಅಪಾರ ಸಾಧನೆ ಮಾಡಿದ ಇವರು ತನ್ನ ಜೀವನವನ್ನು ಕೃಷಿಗಾಗಿ ಮುಡಿಪಾಗಿಟ್ಟವರು.

1934ರ ಎಪ್ರಿಲ್ 4ರಂದು ಜನಿಸಿದ ಲಿವಿಂಗ್ ಸ್ಟನ್ ಚಂದ್ರಮೋಹನ ಸೋನ್ಸ್ ಸಸ್ಯ ಶಾಸ್ತ್ರದಲ್ಲಿ ಪದವಿ, ಮೊಂಟಾನ ವಿ.ವಿ.ಯಿಂದ ಪಿಎಚ್ ಡಿ. ಪದವಿ ಪಡೆದುಕೊಂಡಿದ್ದರು.ಕೃಷಿ ಕ್ಷೇತ್ರದಲ್ಲಿ ಅಸಾಮಾನ್ಯ ಸಾಧನೆ ಮಾಡಿರುವ ಸೋನ್ಸ್ ಅನಾನಸು ಕೃಷಿ, ಬಿದಿರಿನ ವಿವಿಧ ಪ್ರಬೇಧ, ದೇಶ-ವಿದೇಶಗಳ ಹಣ್ಣು-ತರಕಾರಿ ಪ್ರಬೇಧಗಳನ್ನು ಮೂಡುಬಿದಿರೆ ಬನ್ನಡ್ಕದ ಮಣ್ಣಿನಲ್ಲಿ ಬೆಳೆಸಿ, ಅದರಿಂದ ಫಸಲು ಹಾಗೂ ಲಾಭಗಳಿಸಿದವರಾಗಿದ್ದಾರೆ. ಜಲ ತಜ್ಞರಾಗಿಯೂ ವಿಶೇಷ ಪರಿಣಿತಿಯನ್ನು ಹೊಂದಿದ್ದರು.

Also Read  ಒಂದೇ ದಿನ 6 ಜನರಿಗೆ ಮಂಗನ ಕಾಯಿಲೆ ದೃಢ- ಆರೋಗ್ಯ ಇಲಾಖೆ

 

 

 

 

 

 

 

error: Content is protected !!
Scroll to Top