ಈಜಲು ತೆರಳಿದ್ದ ಇಬ್ಬರು ಯುವಕರು ಕೆರೆಯಲ್ಲಿ ಮುಳುಗಿ ಮೃತ್ಯು

(ನ್ಯೂಸ್ ಕಡಬ)newskadaba.com ದಾವಣಗೆರೆ, ಏ.05. ಈಜಲು ತೆರಳಿದ ಇಬ್ಬರು ಯುವಕರು‌ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಜಗಳೂರು ತಾಲೂಕಿನ ಚಿಕ್ಕಮಲ್ಲನಹೊಳೆ ಗ್ರಾಮದಲ್ಲಿ ಸಂಭವಿಸಿದೆ.

ರಾಜು ಮತ್ತು ವಿಜಯ್ ಎಂಬ ಸ್ನೇಹಿತರು ಮೃತರು.ಬೇಸಿಗೆ ರಜೆ ಹಿನ್ನೆಲೆಯಲ್ಲಿ ಕುರಿ ಕಾಯಲು ಹೋಗಿದ್ದ ಇವರು, ಬಿಸಿಲಿನ ತಾಪಕ್ಕೆ ಗೊಲ್ಲರಹಟ್ಟಿ ಕೆರೆಯಲ್ಲಿ ಈಜಲು ಹೋಗಿದ್ದರು. ಈಜುವ ವೇಳೆ ಆಳವಾದ ಗುಂಡಿಯಲ್ಲಿ ಮುಳುಗುತ್ತಿದ್ದ ರಾಜುವನ್ನು ರಕ್ಷಿಸಲು ವಿಜಯ್ ಕೂಡ ಧುಮುಕಿದ್ದ. ಆದರೆ ಕೊನೆಗೆ ಇಬ್ಬರೂ ಮುಳುಗಲಾರಂಭಿಸಿದ್ದಾರೆ.

ಮತ್ತೋರ್ವ ಯುವಕ ಇವರಿಬ್ಬರನ್ನು ರಕ್ಷಿಸಲು ಪ್ರಯತ್ನಿಸಿದ್ದ ಅದರೆ ಆ ವೇಳೆಗೆ ಇಬ್ಬರು ಕೆರೆಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಗ್ರಾಮಸ್ಥರು ಶವಗಳನ್ನು ಹೊರತೆಗೆದಿದ್ದು, ಜಗಳೂರು ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

Also Read  ನ್ಯೂ ಅಕ್ಷರದೇವಿ ಫ್ಯಾನ್ಸಿ ಮತ್ತು ಟೈಲರಿಂಗ್ ಶುಭಾರಂಭ

 

 

error: Content is protected !!
Scroll to Top