ಸುಳ್ಯ: ಕೋಳಿ ಪದಾರ್ಥಕ್ಕೆ ನಡೆದ ಜಗಳ ಕೊಲೆಯಲ್ಲಿ ಅಂತ್ಯ ➤ ಮಗನನ್ನು ಹೊಡೆದು ಕೊಂದ ಪಾಪಿ ತಂದೆ

(ನ್ಯೂಸ್ ಕಡಬ)newskadaba.com ಸುಳ್ಯ, ಏ.05. ಕೋಳಿ ಪದಾರ್ಥಕ್ಕೆ ನಡೆದ ಜಗಳ‌ಕೊಲೆಯಲ್ಲಿ ಅಂತ್ಯವಾದ ಶಾಕಿಂಗ್ ಘಟನೆ ಕರಾವಳಿಯ ಸುಳ್ಯ ತಾಲೂಕಿನಲ್ಲಿ ನಡೆದಿದೆ. ಶಿವರಾಮ(32) ಮೃತರು ಎಂದು ಗುರುತಿಸಲಾಗಿದೆ.


ಮೊಗ್ರ ಏರಣಗುಡ್ಡೆಯ ಮಾತೃಮಜಲು ನಿವಾಸಿ ಶೀನ ಅವರ ಮನೆಯಲ್ಲಿ ಕೋಳಿ ಪದಾರ್ಥ ಮಾಡಲಾಗಿತ್ತು. ‌ಮಗ ಶಿವರಾಮ ರಾತ್ರಿ ತಡವಾಗಿ ಬಂದಾಗ ಪದಾರ್ಥ ಖಾಲಿಯಾಗಿತ್ತು.‌ ಈ ಹಿನ್ನೆಲೆ‌ ಶಿವರಾಮ ಮನೆಯಲ್ಲಿ ಗಲಾಟೆ ಮಾಡಿದ್ದಾರೆ. ಇದಕ್ಕೆ ಕೋಪಗೊಂಡ ಶೀನ ಮಗನಿಗೆ ದೊಣ್ಣೆಯಿಂದ ತಲೆಗೆ ಹಲ್ಲೆ ನಡೆಸಿದ್ದಾರೆ. ಈ ವೇಳೆ ಶಿವರಾಮ ಅವತ ತಲೆಗೆ ಬಲವಾದ ಏಟು ಬಿದ್ದು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

Also Read  ಸಿಸಿಬಿ ಪೊಲೀಸರ ಮಿಂಚಿನ ಕಾರ್ಯಾಚರಣೆ ➤ ಬೆಳ್ಳಂಬೆಳಗ್ಗೆ ಎರಡು ಕಡೆ ಶೂಟೌಟ್

error: Content is protected !!
Scroll to Top