ಬೆಳ್ತಂಗಡಿ: ಯುವತಿಯ ಜೊತೆ ಮಾತನಾಡಿದ್ದಕ್ಕೆ ತಂಡದಿಂದ ಯುವಕನೋರ್ವನಿಗೆ ಹಲ್ಲೆ

(ನ್ಯೂಸ್ ಕಡಬ)newskadaba.com ಬೆಳ್ತಂಗಡಿ, ಏ.05. ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭ ಪರಿಚಯಸ್ಥ ಸಹ ಪ್ರಯಾಣಿಕೆಯೊಂದಿಗೆ ಮಾತನಾಡಿದ್ದನ್ನೇ ನೆಪವಾಗಿರಿಸಿ ಯುವಕರ ಗುಂಪೊಂದು ಯುವತಿಗೆ ಹಲ್ಲೆ ನಡೆಸಿದ ಘಟನೆ ತಾಲೂಕಿನ ಉಜಿರೆಯಲ್ಲಿ ವರದಿಯಾಗಿದೆ. ಕಕ್ಕಿಂಜೆ ನಿವಾಸಿ ಶಾಹಿಲ್ (22) ಹಲ್ಲೆಗೆ ಒಳಗಾದ ಯುವಕ ಎಂದು ಗುರುತಿಸಲಾಗಿದೆ.

ಈತ ಮಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದು, ಬಸ್ಸಿನಲ್ಲಿ ಬರುತ್ತಿದ್ದ ವೇಳೆ ತನ್ನ ಪರಿಚಯದ ಯುವತಿಯೊಂದಿಗೆ ಮಾತನಾಡುತ್ತಾ ಪ್ರಯಾಣಿಸುತ್ತಿದ್ದ ಎನ್ನಲಾಗಿದೆ. ಯುವತಿ ಬೆಳ್ತಂಗಡಿಯಲ್ಲಿ ಇಳಿದಿದ್ದು, ಬಸ್ಸಿನಲ್ಲಿ ಇವರನ್ನು ಗಮನಿಸಿ ಯಾರೋ ಯುವಕರಿಗೆ ಮಾಹಿತಿ ನೀಡಿದ್ದು, ಈತನನ್ನು ಉಜಿರೆಯಲ್ಲಿ ಕಾದು ನಿಂತಿದ್ದ ಯುವಕರ ತಂಡ ಬಸ್ಸಿನಿಂದ ಹೊರಗೆಳೆದು ಹಲ್ಲೆ ಮಾಡಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.

Also Read  ಕಡಬ: ನಾಪತ್ತೆಯಾಗಿದ್ದ ವ್ಯಕ್ತಿ ಶವವಾಗಿ ಪತ್ತೆ

 

error: Content is protected !!
Scroll to Top