ಡಿ.ಕೆ.ಶಿವಕುಮಾರ್ ಗೆ  ಸಂಕಷ್ಟ     ➤ ನೀತಿ ಸಂಹಿತೆ ಉಲ್ಲಂಘನೆ ಆರೋಪದಲ್ಲಿ `FIR’ದಾಖಲು..!!

(ನ್ಯೂಸ್ ಕಡಬ)Newskadaba.com ಮಂಡ್ಯ,ಏ.04 ಚುನಾವಣೆ ಹೊತ್ತಲ್ಲೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಗೆ ಸಂಕಷ್ಟ ಎದುರಾಗಿದ್ದು, ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಬೇವಿನಹಳ್ಳಿ ಗ್ರಾಮದಲ್ಲಿ ಕಾಂಗ್ರೆಸ್ ನ ಪ್ರಜಾಧ್ವನಿ ಯಾತ್ರೆ ವೇಳೆ ಕಲಾವಿದರ ಮೇಲೆ 500 ರೂಪಾಯಿ ನೋಟಿನ ಕಂತೆ ಎಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿ.ಕೆ ಶಿವಕುಮಾರ್ ವಿರುದ್ಧ ಎಫ್​ಐಆರ್​ ದಾಖಲಾಗಿದೆ.

ಪ್ರಜಾಧ್ವನಿ ಯಾತ್ರೆ ವೇಳೆ ಬಸ್​ ಮೇಲಿಂದ ಕಲಾವಿದರತ್ತ 500 ರೂ. ನೋಟುಗಳನ್ನು ಎಸೆದಿದ್ದರು. ಚುನಾವಣೆ ನೀತಿ ಸಂಹಿತೆ ಉಲ್ಲಂಘಿಸಿದ ಆರೋಪದಲ್ಲಿ ಡಿಕೆ ಶಿವಕುಮಾರ್​​ ವಿರುದ್ಧ ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್​ ದಾಖಲಾಗಿದ್ದು, ಪ್ರಕರಣದ ತನಿಖೆ ನಡೆಸುವಂತೆ ನ್ಯಾಯಾಲಯ ಆದೇಶಿಸಿದೆ.ನ್ಯಾಯಾಲಯದ ಆದೇಶದಂತೆ ನಿನ್ನೆ ಡಿ.ಕೆ ಶಿವಕುಮಾರ್​ ವಿರುದ್ದ ಎಫ್‌ಐ‌ಆರ್ ದಾಖಲಾಗಿದ್ದು, ಚುನಾವಣೆ ಹೊತ್ತಿನಲ್ಲೇ ಡಿ.ಕೆ.ಶಿವಕುಮಾರ್ ಗೆ ಸಂಕಷ್ಟ ಎದುರಾಗಿದೆ.

Also Read  ಬ್ಲ್ಯಾಕ್​, ವೈಟ್, ಯೆಲ್ಲೋ ಆಯ್ತು.... ಈಗ ಗ್ರೀನ್​ ಫಂಗಸ್​ ಪತ್ತೆ..!

 

 

error: Content is protected !!
Scroll to Top