ಉಪ್ಪಿನಂಗಡಿ: ಬಟ್ಟೆ ಅಂಗಡಿಯಲ್ಲಿ ಅಗ್ನಿ ಅವಘಡ

(ನ್ಯೂಸ್ ಕಡಬ)newskadaba.com ಉಪ್ಪಿನಂಗಡಿ, ಏ.04. ಬಟ್ಟೆ ಅಂಗಡಿಯಲ್ಲಿ ಅಗ್ನಿ ಅವಘಡ ಸಂಭವಿಸಿದ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ.
ಉಪ್ಪಿನಂಗಡಿಯ ವಿವಾ ಫ್ಯಾಶನ್ ಗೆ ಬೆಂಕಿ ಬಿದ್ದು ಅಗ್ನಿ ಅವಘಡ ಸಂಭವಿಸಿದೆ ಎನ್ನಲಾಗಿದೆ. ಘಟನೆಯಲ್ಲಿ ಬಟ್ಟೆಗಳು ಬೆಂಕಿಗೆ ಆಹುತಿಯಾಗಿರುವ ಬಗ್ಗೆ ಮಾಹಿತಿ ಇದೆ.


ಸ್ಥಳದಲ್ಲಿ ಬೆಂಕಿ‌ ನಂದಿಸುವ ಕಾರ್ಯ ನಡೆಯುತ್ತಿದೆ. ಬಹುಮಡಿ ಕಟ್ಟಡದ ಒಂದು ಮತ್ತು ಎರಡನೇ ಹಂತಸ್ತಿನಲ್ಲಿ ಬಟ್ಟೆ ಅಂಗಡಿ ಇದೆ.‌ಬೆಳಿಗ್ಗೆ ಮಳಿಗೆಯಿಂದ ಹೊಗೆ ಬರುವುದು ಕಂಡು ಜನರು ಮಾಹಿತಿ ನೀಡಿದ್ದಾರೆ.

Also Read  ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ➤ 2023-24ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ದಿನಗಳಲ್ಲಿ ಭಾರೀ ಬದಲಾವಣೆ


ಇದೇ ಬಿಲ್ಡಿಂಗ್ ನ ನೆಲ‌ ಹಂತಸ್ತಿನಲ್ಲಿ ಚಿನ್ನದ ಅಂಗಡಿ, ಅಪ್ಟಿಕಲ್ಸ್ ಅಂಗಡಿ ಇದೆ ಎನ್ನಲಾಗಿದೆ.ಘಟನೆಗೆ ಕಾರಣ ತಿಳಿದು ಬಂದಿಲ್ಲ. ಈ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

 

error: Content is protected !!
Scroll to Top