(ನ್ಯೂಸ್ ಕಡಬ)newskadaba.com ನವದೆಹಲಿ, ಏ.04. ಹೊಸ ಹಣಕಾಸು ವರ್ಷ ಪ್ರಾರಂಭವಾಗುತ್ತಿದ್ದಂತೆ ಕೇಂದ್ರ ಸರ್ಕಾರ ಕೆಲವು ಪ್ರಮುಖ ನಿರ್ಧಾರಗಳನ್ನ ತೆಗೆದುಕೊಂಡಿದ್ದು, ಕೆಲವು ಸರಕುಗಳ ಬೆಲೆಗಳು ಇಳಿದಿದ್ದು, ಮತ್ತೆ ಕೆಲವು ಸರಕುಗಳ ಬೆಲೆಗಳು ಏರಿಕೆಯಾಗಿವೆ.
ಇತ್ತೀಚಿನ ಮಾಹಿತಿಯ ಪ್ರಕಾರ, ಔಷಧಗಳ ಬೆಲೆ ಏರಿಕೆಯ ಸುದ್ದಿಯಿಂದ ಜನರು ಬೇಸತ್ತಿದ್ದು, ಇದೀಗ 651 ಅಗತ್ಯ ಔಷಧಿಗಳ ಬೆಲೆಯನ್ನ ಏಪ್ರಿಲ್ 1 ರಿಂದ ಜಾರಿಗೆ ಬರುವಂತೆ ಸರಾಸರಿ ಶೇ.6.73 ರಷ್ಟು ಕಡಿಮೆ ಮಾಡಲಾಗಿದೆ ಎಂದು ರಾಷ್ಟ್ರೀಯ ಔಷಧೀಯ ಬೆಲೆ ಪ್ರಾಧಿಕಾರ ತಿಳಿಸಿದೆ.