(ನ್ಯೂಸ್ ಕಡಬ)newskadaba.com ನವದೆಹಲಿ, ಏ.04. 12ನೇ ತರಗತಿಯ ಮಧ್ಯಕಾಲೀನ ಇತಿಹಾಸ ಪಠ್ಯಪುಸ್ತಕಗಳಿಂದ ಕಿಂಗ್ಸ್ ಮತ್ತು ಕ್ರಾನಿಕಲ್ಸ್ ಹಾಗೂ ದಿ ಮೊಘಲ್ ಕೋರ್ಟ್ಸ್ ಅಧ್ಯಾಯಗಳನ್ನು ಕೈಬಿಡಲಾಗಿದೆ ಎಂದು ವರದಿ ತಿಳಿಸಿದೆ.
ಯುಪಿ ಬೋರ್ಡ್ ಮತ್ತು ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (CBSE) ನ 12 ನೇ ತರಗತಿ ವಿದ್ಯಾರ್ಥಿಗಳಿಗೂ ಇನ್ನು ಮುಂದೆ ಮೊಘಲ್ ನ್ಯಾಯಾಲಯಗಳ ಇತಿಹಾಸವನ್ನು ಅಧ್ಯಯನ ಮಾಡುವುದಕ್ಕೆ ಅವಕಾಶ ಇರುವುದಿಲ್ಲ.
ನ್ಯಾಷನಲ್ ಕೌನ್ಸಿಲ್ ಆಫ್ ಎಜುಕೇಶನಲ್ ರಿಸರ್ಚ್ ಅಂಡ್ ಟ್ರೈನಿಂಗ್ (NCERT) ಮೊಘಲ್ ಸಾಮ್ರಾಜ್ಯದ ಅಧ್ಯಾಯಗಳನ್ನು ತೆಗೆದು 12 ನೇ ತರಗತಿಯ ಇತಿಹಾಸ ಪುಸ್ತಕ ಸೇರಿದಂತೆ ತನ್ನ ಪುಸ್ತಕಗಳನ್ನು ಪರಿಷ್ಕರಿಸಿದೆ. ದೇಶಾದ್ಯಂತ ಎನ್‌ಸಿಇಆರ್‌ಟಿ ಅನುಸರಿಸುವ ಎಲ್ಲಾ ಶಾಲೆಗಳಿಗೆ ಬದಲಾವಣೆ ಅನ್ವಯಿಸುತ್ತದೆ ಎಂದು ವರದಿ ತಿಳಿಸಿದೆ.