ಚುನಾವಣಾ ಆಯೋಗದಿಂದ ಭರ್ಜರಿ ಭೇಟೆ  ➤ ರಾಜ್ಯಾದ್ಯಂತ ಆರೇ ದಿನಗಳಲ್ಲಿ 47 ಕೋಟಿ ರೂ.ಜಪ್ತಿ..!  

(ನ್ಯೂಸ್ ಕಡಬ) newskadaba.com ಬೆಂಗಳೂರು, ಏ. 04. ಕರ್ನಾಟಕ ವಿಧಾನಸಭೆ ಚುನಾವಣಾ ನೀತಿ ಸಂಹಿತೆ ಜಾರಿಯಾದ ಹಿನ್ನೆಲೆಯಲ್ಲಿ ಭರ್ಜರಿ ಕಾರ್ಯಾಚರಣೆ ನಡೆಸಿದ ಚುನಾವಣಾ ಆಯೋಗವು ರಾಜ್ಯಾದ್ಯಂತ ನಗದು, ಮದ್ಯ, ಉಡುಗೊರೆ, ಮಾದಕವಸ್ತುಗಳು ಸೇರಿದಂತೆ ಒಟ್ಟು 47.43 ಕೋಟಿ ರೂ. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿದೆ.

ಚುನಾವಣಾ ದಿನಾಂಕ ಘೋಷಣೆಗೂ ಮೊದಲು 80 ಕೋಟಿ ರೂ. ನಗದು ಹಾಗೂ ಇತರೆ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಇದೀಗ ಅಬಕಾರಿ ಇಲಾಖೆಯು 450 ಗಂಭೀರ ಪ್ರಕರಣಗಳು, ಮದ್ಯದ ಪರವಾನಗಿ ನಿಯಮ ಉಲ್ಲಂಘನೆ ಅಡಿ 305 ಪ್ರಕರಣಗಳು, 16 ಎನ್ ಡಿಪಿಎಸ್ ಮತ್ತು ಕರ್ನಾಟಕ ಅಬಕಾರಿ ಕಾಯ್ದೆಯಡಿ ಒಟ್ಟು 1,238 ಪ್ರಕರಣಗಳನ್ನು ದಾಖಲಿಸಿದ್ದು, 270 ವಾಹನಗಳನ್ನು ಜಪ್ತಿ ಮಾಡಿ, 316 ಎಫ್ ಐಆರ್ ದಾಖಲಿಸಿದೆ.

Also Read  ಕಾಸರಗೋಡು: ಪಡಿತರ ಬೆಳ್ತಿಗೆ ಅಕ್ಕಿಗೆ ಬೇಡಿಕೆ ಕುಸಿತ..!                     

error: Content is protected !!
Scroll to Top