ಬಂಟ್ವಾಳ: ಮುಸಲ್ಮಾನರಲ್ಲಿ ಮಾತನಾಡಬಾರದೆಂದು ಮನೆಗೆ ನುಗ್ಗಿ ದಾಂಧಲೆ ► ಆರೋಪಿಗಳಿಬ್ಬರ ಬಂಧನ, ಇನ್ನಿಬ್ಬರು ಪರಾರಿ

(ನ್ಯೂಸ್ ಕಡಬ) newskadaba.com ಬಂಟ್ವಾಳ, ಜ.09. ಮುಸಲ್ಮಾನರಲ್ಲಿ ಮಾತನಾಡಬಾರದೆಂದು ಯುವತಿಯ ಮನೆಗೆ ನುಗ್ಗಿ ದಾಂಧಲೆ ನಡೆಸಿದ ಘಟನೆ ಬಂಟ್ವಾಳದ ಮೇರಮಜಲು ಎಂಬಲ್ಲಿ ಮಂಗಳವಾರ ಸಂಜೆ ನಡೆದಿದ್ದು, ಘಟನೆಗೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಎಸ್ಪಿ ಸುಧೀರ್ ಕುಮಾರ್ ರೆಡ್ಡಿ ಹೇಳಿದ್ದಾರೆ.

ಬಂಧಿತ ಆರೋಪಿಗಳನ್ನು ರಿಕ್ಷಾ ಚಾಲಕ ಉಮೇಶ್(33) ಹಾಗೂ ರಮೇಶ್(48) ಎಂದು ಗುರುತಿಸಲಾಗಿದ್ದು, ಇನ್ನಿಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ. ಬಂಟ್ವಾಳದ ಮೇರಮಜಲಿನ ಯುವತಿಯು ಮುಸ್ಲಿಮರೊಂದಿಗೆ ಸ್ನೇಹ ಬೆಳೆಸಿಕೊಂಡಿದ್ದಾಳೆ ಎಂದು ಆರೋಪಿಸಿ ಆಕೆಯ ಮನೆಗೆ ನುಗ್ಗಿರುವ ನಾಲ್ವರು ದುಷ್ಕರ್ಮಿಗಳು ದಾಂಧಲೆ ನಡೆಸಿದ್ದಲ್ಲದೆ ಯುವತಿಯ ತಾಯಿಗೂ ಹಲ್ಲೆ‌ ನಡೆಸಿದ್ದಾರೆ ಎನ್ನಲಾಗಿದೆ. ಘಟನೆಯ ಕುರಿತು ಯುವತಿಯ ಮನೆಯವರು ನೀಡಿದ ದೂರಿನಂತೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಖಾಸಗಿ ಬಸ್ ದರ ಹೆಚ್ಚಳಕ್ಕೆ ಸರ್ಕಾರ ಅಸ್ತು

 

error: Content is protected !!
Scroll to Top