ದೇಶದ ನಿವ್ವಳ ನೇರ ತೆರಿಗೆ ಸಂಗ್ರಹ ಶೇ 18ರಷ್ಟು ಏರಿಕೆ.!!

(ನ್ಯೂಸ್ ಕಡಬ)Newskadaba.com ನವದೆಹಲಿ,ಏ.04  2022-23ರಲ್ಲಿ ದೇಶದ ನಿವ್ವಳ ನೇರ ತೆರಿಗೆ ಸಂಗ್ರಹ ಶೇ 18ರಷ್ಟು ಏರಿಕೆಯಾಗಿ ₹ 16.61 ಲಕ್ಷ ಕೋಟಿಗೆ ತಲುಪಿದೆ ಎಂದು ಹಣಕಾಸು ಸಚಿವಾಲಯ ಮಾಹಿತಿ ನೀಡಿದೆ.2021-22ರ ಅವಧಿಯಲ್ಲಿ ನಿವ್ವಳ ನೇರ ತೆರಿಗೆ ಸಂಗ್ರಹ ₹ 14.12 ಲಕ್ಷ ಕೋಟಿ ಇತ್ತು.ಇದಕ್ಕೆ ಹೋಲಿಸಿದರೆ ಈಗ ಸಂಗ್ರಹಿಸಲಾಗಿರುವ ತೆರಿಗೆ ಶೇ 17.63ರಷ್ಟು ಹೆಚ್ಚು.

2022-23ನೆಯ ಸಾಲಿಗೆ ಬಜೆಟ್‌ ಅಂದಾಜಿನ ಪ್ರಕಾರ ನೇರ ತೆರಿಗೆ ಸಂಗ್ರಹವು ₹ 14.20 ಲಕ್ಷ ಕೋಟಿ ಆಗುವ ನಿರೀಕ್ಷೆ ಇತ್ತು. ಪರಿಷ್ಕೃತ ಅಂದಾಜಿನ ಪ್ರಕಾರ ಇದು ₹ 16.50 ಲಕ್ಷ ಕೋಟಿ ಆಗಿತ್ತು.ಒಟ್ಟು ನೇರ ತೆರಿಗೆ ಸಂಗ್ರಹವು ಜನರಿಂದ ಸಂಗ್ರಹಿಸಿದ ಆದಾಯ ತೆರಿಗೆ ಹಾಗೂ ಕಾರ್ಪೊರೇಟ್‌ ತೆರಿಗೆಯನ್ನು ಒಳಗೊಂಡಿರುತ್ತದೆ. 2022-23ರಲ್ಲಿ ಒಟ್ಟು ₹ 3.07 ಲಕ್ಷ ಕೋಟಿ ಮರುಪಾವತಿ ಮಾಡಲಾಗಿದೆ ಎಂದು ಸಚಿವಾಲಯ ಹೇಳಿದೆ.

Also Read  ಸ್ಯಾಂಡಲ್‍ವುಡ್ ಡ್ರಗ್ ಕೇಸ್ ಪ್ರಕರಣ ➤ ಬಾಲಿವುಡ್ ನಟ ವಿವೇಕ್ ಒಬೆರಾಯ್‍ಗೆ ಸಿಸಿಬಿ ಶಾಕ್

 

 

 

 

 

 

 

 

 

 

 

 

error: Content is protected !!
Scroll to Top