ಮಂಗಳೂರು: ಅಕ್ರಮವಾಗಿ ಪಿಸ್ತೂಲ್ ಹೊಂದಿದ್ದ ಆರೋಪಿ ಅರೆಸ್ಟ್

(ನ್ಯೂಸ್ ಕಡಬ)newskadaba.com ಮಂಗಳೂರು, ಏ.04. ಅಕ್ರಮವಾಗಿ ಪಿಸ್ತೂಲ್‌ ಹೊಂದಿದ್ದ ವ್ಯಕ್ತಿಯೋರ್ವನನ್ನು ಕದ್ರಿ ಪೊಲೀಸರು ಬಂಧಿಸಿದ್ದಾರೆ. ನಗರದ ಕದ್ರಿ ಪೊಲೀಸ್‌ ಠಾಣಾ ವ್ಯಾಪ್ತಿಯ ಜಾರ್ಜ್‌ ಮಾರ್ಟಿಸ್‌ ರಸ್ತೆಯ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದ ಶಿಶಿರ್‌ ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಈತನಿಂದ ಒಂದು ಪಿಸ್ತೂಲ್‌ ಮತ್ತು ಬುಲೆಟ್‌ ವಶಪಡಿಸಿಕೊಳ್ಳಲಾಗಿದೆ ಎಂದು ವರದಿ ತಿಳಿಸಿದೆ.


ತನ್ನ ಮನೆಯ ಒಂದು ಮಹಡಿಯಲ್ಲಿ ಸುಮಾರು ಐದು ತಿಂಗಳಿಂದ ಬಾಡಿಗೆ ಇದ್ದ ಶಿಶಿರ್‌ ಬಳಿ ಪಿಸ್ತೂಲ್‌ ಇರುವ ಬಗ್ಗೆ ಮನೆಯ ಮಾಲಕರು ಪೊಲೀಸರಿಗೆ ದೂರು ನೀಡಿದ್ದರು. ಅದರಂತೆ ಕದ್ರಿ ಪೊಲೀಸರು ಶಿಶಿರ್‌ನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಪಿಸ್ತೂಲನ್ನು ತನ್ನ ಗೆಳೆಯ ನೀಡಿರುವುದಾಗಿ ಹೇಳಿದ್ದಾನೆ. ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Also Read  ಶೀಘ್ರದಲ್ಲೇ ಜನಗಣತಿ ಕಾರ್ಯ ಆರಂಭ- ಕೇಂದ್ರ ಗೃಹ ಸಚಿವ ಅಮಿತ್ ಶಾ

error: Content is protected !!
Scroll to Top