ಟ್ರಾನ್ಸ್ ಫಾರ್ಮರ್ ನಿಂದ ಕಿಡಿ ಹಾರಿ ಕಾಡಿಗೆ ಆಕಸ್ಮಿಕ ಬೆಂಕಿ !

(ನ್ಯೂಸ್ ಕಡಬ)newskadaba.com ಶಿರ್ವ, ಏ.03. ವಿದ್ಯುತ್ ಟ್ರಾನ್ಸ್ ಫಾರ್ಮರ್ ನಿಂದ ಹಾರಿದ ಕಿಡಿಯಿಂದ ಕಾಡಿಗೆ ಬೆಂಕಿ ಹೊತ್ತಿಕೊಂಡ ಘಟನೆ ಶಿರ್ವ ಎಂಬಲ್ಲಿ ಸಂಭವಿಸಿದೆ. ತಾಂತ್ರಿಕ ಕಾಲೇಜು ಬಳಿ ಇದ್ದ ಟ್ರಾನ್ಸ್ ಫಾರ್ಮರ್ ನಿಂದ ಬೆಂಕಿಯ ಕಿಡಿ ಬಿದ್ದ ಪರಿಣಾಮ ತರೆಗೆಲೆಗೆ ಬೆಂಕಿ ಹತ್ತಿ ಕಾಡಿಗೆ ವ್ಯಾಪಿಸಿದೆ ಎನ್ನಲಾಗಿದೆ.

ಬೆಂಕಿಯ ಪ್ರಮಾಣ ಹೆಚ್ಚಾಗುತ್ತಿದ್ದಂತೆ ಸ್ಥಳೀಯರು ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದ್ದಾರೆ ಬಳಿಕ ಸ್ಥಳೀಯರು ಸೇರಿ ಬೆಂಕಿ ನಂದಿಸುವ ಪ್ರಯತ್ನ ಮಾಡಿದರೂ ಹತೋಟಿಗೆ ಬರಲಿಲ್ಲ ಈ ವೇಳೆ ಸ್ಥಳಕ್ಕೆ ಆಗಮಿಸಿದ ಉಡುಪಿ ಅಗ್ನಿಶಾಮಕ ದಳದ ಮೀರ್ ಮಹಮ್ಮದ್ ಗೌಸ್ ಮತ್ತು ಅವರ ತಂಡ ಬೆಂಕಿಯನ್ನು ಹತೋಟಿಗೆ ತರಲು ಹರಸಾಹಸಪಟ್ಟರು, ಅಲ್ಲದೆ ಅದಾನಿ ಸಂಸ್ಥೆಯ ಅಗ್ನಿಶಾಮಕ ದಳದ ವಾಹನಗಳೂ ಬಂದು ಬೆಂಕಿ ಆರಿಸುವಲ್ಲಿ ಸಹಕರಿಸಿದರು ಎಂದು ವರದಿ ತಿಳಿಸಿದೆ.

Also Read  ನವಜಾತ ಶಿಶುವನ್ನು ಜೀವಂತ ಸಮಾಧಿ ಮಾಡಲು ಹೊರಟ ಕಲ್ಲೆದೆಯ ಪೋಷಕರು...!!!

error: Content is protected !!
Scroll to Top