ಬೈಕ್​​ ಪಾರ್ಕಿಂಗ್ ವಿಚಾರದಲ್ಲಿ ಗಲಾಟೆ…!   ➤ಸ್ನೇಹಿತನನ್ನೇ ಕೊಂದು ದುಷ್ಕರ್ಮಿಗಳು ಪರಾರಿ  

(ನ್ಯೂಸ್ ಕಡಬ)Newskadaba.com ಬೆಂಗಳೂರು, ಏ.01 ಪಶ್ಚಿಮ ಬಂಗಾಳದಿಂದ ಬೆಂಗಳೂರಿಗೆ ಕೆಲಸಕ್ಕೆ ಬಂದಿದ್ದವರಿಗೆ ಉಡುಪಿ ಮೂಲದ ಸ್ನೇಹಿತ ಕೂಡಾ ಜೊತೆಯಾಗಿದ್ದ. ಹೀಗೆ ಬೆಂಗಳೂರಲ್ಲಿ ಬದುಕು ಕಟ್ಟಿಕೊಂಡು, ಮೂವರು ಒಂದೇ ಮನೆಯಲ್ಲಿ ವಾಸ ಮಾಡುತ್ತಿದ್ದರು.

ಆದರೆ ಒಟ್ಟಿಗೆ ಇದ್ದ ಮೂವರ ಮಧ್ಯೆ ಬೈಕ್ ಪಾರ್ಕಿಂಗ್  ವಿಚಾರಕ್ಕೆ ದೊಡ್ಡ ಗಲಾಟೆಯಾಗಿ ಕೊಲೆಯೇ ನಡೆದು ಹೋಗಿದೆ. ಜಗಳದಲ್ಲಿ ಉಡುಪಿ ಮೂಲದ ಜನಾರ್ದನ ಭಟ್ (29)ಎಂಬಾತನ ಕೊಲೆಯಾಗಿದ್ದಾನೆ.ಜನಾರ್ದನ ಭಟ್ ಪಶ್ಚಿಮ ಬಂಗಾಳ ಮೂಲದ ರಿಜ್ವಾನ್ ಮತ್ತು ಸುಲೇಮಾನ್ ಎಂಬ ಯುವಕರ ಜೊತೆಯಾಗಿದ್ದ. ಕಂಪನಿಯಲ್ಲಿ ಟಿವಿ ರಿಪೇರಿ  ಕೆಲಸ ಮಾಡಿಕೊಂಡಿದ್ದರು.

ಒಂದೇ ಕಡೆ ಕೆಲಸ ಮಾಡುವವರು ಅಂತ ಮಾಲೀಕರು, ಯಲಹಂಕದ  ಶ್ರೀನಿವಾಸಪುರದಲ್ಲಿರುವ, ವಿಶ್ವನಾಥನಗರದಲ್ಲಿರುವ ಸಾಯಿ ಸಮೃದ್ಧಿ ಸ್ಲಂ ಬೋರ್ಡ್ ಅಪಾರ್ಟ್ಮೆಂಟ್ ನಲ್ಲಿ ಒಂದು ಮನೆ ಮಾಡಿ ಕೊಟ್ಟಿದ್ದರು.  ಈ ಬಗ್ಗೆ ಮಾಹಿತಿ ನೀಡಿರುವ ಸ್ಥಳೀಯ ನಿವಾಸಿ ರುಕ್ಮಿಣಿ ಎಂಬವರು, ಮನೆಯಲ್ಲಿದ್ದ ಯುವಕರ ನಡುವೆ ಬೈಕ್ ಪಾರ್ಕಿಂಗ್​ ವಿಚಾರಕ್ಕೆ ಜಗಳ ಆಗಿದ್ದು ಎಲ್ಲರಿಗೂ ಗೊತ್ತಿದೆ. ಆದರೆ ಕೊಲೆಯಾದರೂ ರೂಮ್​​ನಲ್ಲಿದ್ದ ಇತರೇ ಯುವಕರು ಇದುವರೆಗೂ ಇತ್ತ ಬಂದಿಲ್ಲ ಎಂದಿದ್ದಾರೆ.

Also Read  ಕಡಬದಲ್ಲಿ ಎಸ್ಐ ಆಗಿ ಸಾರ್ವಜನಿಕರ ಪ್ರೀತಿ ಗಳಿಸಿದ್ದ ಇಂಟೆಲಿಜೆನ್ಸ್‌ ಇನ್ಸ್‌ಪೆಕ್ಟರ್ ➤ ನಂದಕುಮಾರ್ ಗೆ ಮುಖ್ಯಮಂತ್ರಿ ಚಿನ್ನದ ಪದಕ

 

 

 

 

 

 

 

 

error: Content is protected !!
Scroll to Top