ರೈಲು ಪ್ರಯಾಣಿಕರಿಗೆ ಸಿಹಿ ಸುದ್ಧಿ   ➤ಹುಬ್ಬಳ್ಳಿ-ಬೆಂಗಳೂರು ರೈಲು ಮಾರ್ಗದ ವಿದ್ಯುದ್ದೀಕರಣ ಪೂರ್ಣಗೊಂಡಿದೆ

(ನ್ಯೂಸ್ ಕಡಬ)Newskadaba.com ಬೆಂಗಳೂರು, ಏ.01  ರೈಲು ಪ್ರಯಾಣಿಕರಿಗೆ ನೈಋತ್ಯ ರೈಲ್ವೆ ಸಿಹಿ ಸುದ್ದಿಯನ್ನು ಕೊಟ್ಟಿದೆ. ನೈಋತ್ಯ ರೈಲ್ವೆಯ ನಿರೀಕ್ಷೆಯಂತೆ ಬೆಂಗಳೂರು-ಹುಬ್ಬಳ್ಳಿ ರೈಲ್ವೆ ಮಾರ್ಗದ ವಿದ್ಯುದೀಕರಣ ಪೂರ್ಣಗೊಳಿಸಿದೆ. ಏಪ್ರೀಲ್ ತಿಂಗಳು ‘ವಂದೇ ಭಾರತ್‌’ ಅಥವಾ ಇತರೆ ಎಲೆಕ್ಟ್ರಿಕ್‌ ರೈಲುಗಳ ಸಂಚಾರ ಆರಂಭಿಸುವ ಸಾಧ್ಯತೆ ಇದೆ.

ಬೆಂಗಳೂರು-ಹುಬ್ಬಳ್ಳಿಯ ಸುಮಾರು 469 ಕಿ.ಮೀ. ಉದ್ದದ ಈ ಮಾರ್ಗದ ಡಬ್ಲಿಂಗ್‌  ಕಾಮಗಾರಿ ಪೂರ್ಣಗೊಂಡಿದೆ.  ಸುಮಾರು 316 ಕಿಮೀನಷ್ಟು ತೋಳಹುಣಸೆವರೆಗೆ ವಿದ್ಯುದೀಕರಣ ಪೂರ್ಣಗೊಂಡಿದೆ. ಇನ್ನು ಬಾಕಿ ಇದ್ದ 153 ಕಿ.ಮೀ. ಕಾಮಗಾರಿಯೂ ಪೂರ್ಣಗೊಂಡಿದೆ. ಪೋಲ್‌ ಹಾಗೂ ವೈರಿಂಗ್‌ ಅಳವಡಿಕೆ, ಕಾಮಗಾರಿ ಕೂಡ ಪೂರ್ಣಗೊಂಡಿದ್ದು ಇದೇ ತಿಂಗಳು ಉದ್ಘಾಟನೆ ಮಾಡುವ ಗುರಿಯಿಂದೆ ಎಂದು ನೈಋುತ್ಯ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

Also Read  ಬಡವರ ಅನ್ನಭಾಗ್ಯ ಯೋಜನೆಗೆ ಕೇಂದ್ರ ಸರಕಾರ ನಿರಾಕರಣೆ ➤ ಜೂ. 20ರಂದು ಕಾಂಗ್ರೆಸ್ ನಿಂದ ಬೃಹತ್ ಪ್ರತಿಭಟನೆ

 

 

 

 

 

 

 

 

 

error: Content is protected !!
Scroll to Top