ಕಡಬ: ಅಪಘಾತದ ಗಾಯಾಳು ಮೃತ್ಯು

(ನ್ಯೂಸ್ ಕಡಬ) newskadaba.com ಕಡಬ, ಜ.09. ಕಳೆದ ತಿಂಗಳ 26ನೇ ತಾರೀಕಿನಂದು ಅಪಘಾತದ ಗಾಯಾಳು ಮಂಗಳೂರಿನ ಎ.ಜೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆಯೋರ್ವರು ಮೃತಪಟ್ಟ ಘಟನೆ ಸೋಮವಾರದಂದು ನಡೆದಿದೆ.

ಮೃತ ಮಹಿಳೆಯನ್ನು ಸುಳ್ಯ ತಾಲೂಕಿನ ಕರಿಕ್ಕಳ ಮೂಲೂರು ಫಾರ್ಮ್ ನಿವಾಸಿ ಶ್ರೀಶ ಎಂಬವರ ಪತ್ನಿ ಸಂಧ್ಯಾ ಲಕ್ಷ್ಮೀ(20) ಎಂದು ಗುರುತಿಸಲಾಗಿದೆ. ಡಿಸೆಂಬರ್ 26 ರಂದು ರಾತ್ರಿ ಬಿಸಿರೋಡಿನಲ್ಲಿ ನಡೆದಿದ್ದ ಪೂಜೆ ಮುಗಿಸಿ ಹಿಂತಿರುಗುತ್ತಿದ್ದಾಗ ನಿದ್ದೆಯ ಮಂಪರಿನಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಮಾರುತಿ ಬ್ರೆಝಾ ಕಾರು ವಾಣಿಜ್ಯ ಸಂಕೀರ್ಣವೊಂದಕ್ಕೆ ಢಿಕ್ಕಿಯಾಗಿ ಸಂಧ್ಯಾ ಲಕ್ಷ್ಮೀ, ಪತಿ ಶ್ರೀಶ ಹಾಗೂ ಅತ್ತೆ ಸತ್ಯಾವತಿ ಗಾಯಗೊಂಡು ಎ.ಜೆ‌ . ಆಸ್ಪತ್ರೆಗೆ ದಾಖಲಾಗಿದ್ದರು‌. ಗಂಭೀರ ಗಾಯಗೊಂಡಿದ್ದ ಸಂಧ್ಯಾ ಲಕ್ಷ್ಮೀ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಕಡಬ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

Also Read  ರಾತ್ರಿ ಬಸ್ಸಲ್ಲಿ ಅಕ್ರಮವಾಗಿ 34 ಕೆಜಿ ಚಿನ್ನ ಸಾಗಾಟ...! ► 6 ಮಂದಿ ಪೊಲೀಸ್ ವಶಕ್ಕೆ

error: Content is protected !!
Scroll to Top