ನದಿಯಲ್ಲಿ ಮುಳುಗಿ ಭಾರತೀಯರು ಸಹಿತ 8 ಮಂದಿ ಮೃತ್ಯು

(ನ್ಯೂಸ್ ಕಡಬ)newskadaba.com ಕೆನಡಾ, ಏ.01. ಗಡಿ ಮೂಲಕ ಕಾನೂನು ಬಾಹಿರವಾಗಿ ಅಮೆರಿಕಾಕ್ಕೆ ಪ್ರವೇಶಿಸಲು ಯತ್ನಿಸುತ್ತಿದ್ದಾಗ ಸೇಂಟ್ ಲಾರೆನ್ಸ್ ನದಿಯಲ್ಲಿ ಮುಳುಗಿದ್ದವರ ಪೈಕಿ ಇಬ್ಬರ ಮೃತದೇಹಗಳು ಪತ್ತೆಯಾಗಿದ್ದು, ಈ ಮೂಲಕ ಮೃತಪಟ್ಟವರ ಒಟ್ಟು ಸಂಖ್ಯೆ ಎಂಟಕ್ಕೇರಿದೆ ಎಂದು ವರದಿ ತಿಳಿಸಿದೆ.


ಮೃತರ ಪೈಕಿ ಭಾರತೀಯ ಕುಟುಂಬವೊಂದರ ಸದಸ್ಯರೂ ಸೇರಿದ್ದಾರೆ ಎಂದು ಕೆನಡಾ ಪೊಲೀಸರು ತಿಳಿಸಿದ್ದಾರೆ. ಮೃತದೇಹಗಳು ಆಕ್ವಾಸ್ನ್ ಬಳಿಯ ನದಿ ದಂಡೆಯ ಮರಳಿನಲ್ಲಿ ಹೂತು ಹೋದ ಸ್ಥಿತಿಯಲ್ಲಿ ಪತ್ತೆಯಾಗಿದ್ದವು. ಈ ಪೈಕಿ ಮತ್ತೊಬ್ಬ ವ್ಯಕ್ತಿ ಇನ್ನೂ ಕಾಣೆಯಾಗಿದ್ದಾನೆ ಎಂದು ವರದಿಯಾಗಿದೆ.

Also Read  ಆ.1ರಂದು 'ಆಯುಷ್ಮಾನ್ ಭವ 3.0' ಕಾರ್ಯಕ್ರಮಕ್ಕೆ ಚಾಲನೆ - 'ಮನೆ ಬಾಗಿಲಿಗೆ' ಆರೋಗ್ಯ ಸೇವೆ

error: Content is protected !!
Scroll to Top