ಕುರ್ಲಾನ್​ ಕಾರ್ಖಾನೆಗೆ ಇದ್ದಕ್ಕಿದ್ದಂತೆ ತಗುಲಿದ ಬೆಂಕಿ..!  ➤ಅಪಾಯದಿಂದ ಪಾರಾದ ಕಾರ್ಮಿಕರು

(ನ್ಯೂಸ್ ಕಡಬ)Newskadaba.com ಬೆಂಗಳೂರು, ಏ.01 ನೆಲಮಂಗಲ ತಾಲೂಕಿನ ಟಿ. ಬೇಗೂರಿನ ಬಳಿ ಇರುವ ಕುರ್ಲಾನ್ ಕಾರ್ಖಾನೆಗೆ ಇದ್ದಕ್ಕಿಂದತೆ ಬೆಂಕಿ ತಗುಲಿದೆ. ಬೆಂಕಿ ಬೀಳುತ್ತಿದ್ದಂತೆ ಕಾರ್ಮಿಕರೆಲ್ಲರೂ ಹೊರ ಬಂದಿದ್ದಾರೆ. ಲಕ್ಷಾಂತರ ಮೌಲ್ಯದ ವಸ್ತುಗಳು ನಾಶವಾದ ಘಟನೆ ಸಿಲಿಕಾನ್​ ಸಿಟಿಯಲ್ಲಿ ನಡೆದಿದೆ.

ಹೈಟೆನ್ಶನ್ ವೈಯರ್ ಕಾರ್ಖಾನೆ ಮೇಲೆ‌ ಬಿದ್ದ ಕಾರಣ ಬೆಂಕಿ ಹೊತ್ತಿಕೊಂಡಿದೆ ಎಂದು ಹೇಳಲಾಗಿದ್ದು, ಘಟನಾ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಭೇಟಿ ಪರಿಶೀಲನೆ ನಡೆಸುತ್ತಿದ್ದಾರೆ.ಕುರ್ಲಾನ್ ಕಾರ್ಖಾನೆ ಅಕ್ಕ-ಪಕ್ಕದಲ್ಲಿ ಆಯಿಲ್ ಮುಂತಾದ ಕಾರ್ಖಾನೆಯಿದ್ದು, ಜನರಲ್ಲಿ ಆತಂಕ ಎಡೆಮಾಡಿದೆ. ನೆಲಮಂಗಲ ಅಗ್ನಿಶಾಮಕ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Also Read  ಬಿಬಿಎಂಪಿ ಕಸದ ಲಾರಿಗಳಿಂದ ಕೆರೆ ನೀರಿಗೆ ವಿಷಕಾರಿ ದ್ರವ ಸೋರಿಕೆ

 

 

 

 

 

 

error: Content is protected !!
Scroll to Top